ಲೋಕದರ್ಶನವರದಿ
ಹಿರೇಕೆರೂರು: ಪಟ್ಟಣದ ಜೆ ಪಿ ಪೌಂಡೇಶನ್ ವತಿಯಿಂದ ಕೊರೋನಾ ರೋಗದ ನಿಯಂತ್ರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪೋಲಿಸ್ ಇಲಾಖೆ,ಪೌರಕಾಮರ್ಿಕರಿಗೆ, ಅಗ್ನಿಶಾಮಕ ದಳದ ಸಿಬ್ಬಂದಿಯವರಿಗೆ,ಪತ್ರಿಕೆ ಹಂಚುವರಿಗೆ ಪ್ರತಿನಿತ್ಯ ಉಪಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.
ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಜೆ.ಪಿ.ಪೌಂಡೇಶನ್ ನ ಅಧ್ಯಕ್ಷರಾದ ಲಿಂಗರಾಜ ಚಪ್ಪರದಹಳ್ಳಿ ಇವರ ನೇತೃತ್ವದಲ್ಲಿ ಉಪಹಾರ ವ್ಯವಸ್ತೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಇಂಗಳಗೊಂದಿ ಗ್ರಾಮದ ಕೆಲ ಗ್ರಾಮಸ್ಥರು ಉಪಸ್ಥಿತರಿದ್ದರು.
ಜೆ.ಪಿ.ಪೌಂಡೇಶನ್ ವತಿಯಿಂದ ಮನೆಯಲ್ಲಿಯೇ ತೈಯಾರಿಸಿದ ಮಾಸ್ಕಗಳನ್ನು ಹಿರೇಕೆರೂರು ಯೂನಿಯನ್ ಬ್ಯಾಂಕ್ ಶಾಖೆಗೆ ಮಾಸ್ಕ್ ಧರಿಸದೇ ಬರುವ ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸುವುದರ ಮೂಲಕ ಗ್ರಾಹಕರಿಗೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.