ಬ್ರೆಜಿಲ್‌: 24 ಗಂಟೆಯಲ್ಲಿ 26 ಸಾವಿರ ಹೊಸ ಪ್ರಕರಣ ದಾಖಲು

ಬ್ರೆಸಿಲಿಯಾ, ಜು. 6: ಕಳೆದ 24 ಗಂಟೆಗಳಲ್ಲಿ 26,000 ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಬ್ರೆಜಿಲ್‌ನಲ್ಲಿ ದೃಡಪಡಿಸಿದ  ಕೊರೊನಾಸೋಂಕು ಪ್ರಕರಣಗಳ ಸಂಖ್ಯೆಈಗ  1.6 ದಶಲಕ್ಷ ಮೀರಿದೆ ಎಂದು  ಆರೋಗ್ಯ ಸಚಿವಾಲಯ ತಿಳಿಸಿದೆ.

ಬ್ರೆಜಿಲ್‌ನಲ್ಲಿ ಈಗ ಒಟ್ಟು 1,603,055 ದೃಡಪಡಿಸಿದ  ಪ್ರಕರಣಗಳು ದಾಖಲಾಗಿವೆ.  ಕಳೆದ 24 ಗಂಟೆಗಳಲ್ಲಿ, 26,051 ಹೊಸ ಪ್ರಕರಣಗಳು ದಾಖಲಾಗಿದ್ದು . 602 ಹೊಸ ಸಾವುಗಳು ದೃಡಪಟ್ಟಿವೆ  ಎಂದೂ   ಸಚಿವಾಲಯದ ಅಂಕಿ ಅಂಶಗಳು ಭಾನುವಾರ ತಿಳಿಸಿವೆ.

ಬ್ರೆಜಿಲ್ ನಲ್ಲಿ ಈವರೆಗೆ ಒಟ್ಟು ಕರೋನಸೋಂಕಿನಿಂದ ಮೃತಪಟ್ಟವರ ಸಂಖ್ಯೆ 64,867 ಕ್ಕೆಏರಿಕೆಯಾಗಿದೆ. 

ಬ್ರೆಜಿಲ್ ವಾರಕ್ಕೆ ಸುಮಾರು 7,000 ಕರೋನ  ಸಾವುನೋವುಗಳನ್ನು ಕಂಡಿದೆ, ಇದು ಹಿಂದಿನ ಏಳು ದಿನಗಳ ಅವಧಿಗಿಂತಲೂ ಹೆಚ್ಚಳವಾಗಿದೆ.

ದೇಶದ ಆರೋಗ್ಯ ಸಚಿವಾಲಯದ ಪ್ರಕಾರ ಬ್ರೆಜಿಲ್‌ನಲ್ಲಿ 906,200 ಕ್ಕೂ ಹೆಚ್ಚು ಜನರು ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಬ್ರೆಜಿಲ್ ವಿಶ್ವದಲ್ಲಿ  ಎರಡನೇ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿದ ದೇಶವಾಗಿದೆ.