ಸಮರ್ಥನಂಗೆ ಒಕ್ವೆಲ್‌ ಫೈನಾನ್ಷಿಯಲ್‌ನಿಂದ ಬ್ರೈಲ್ ಮುದ್ರಕ ಕೊಡುಗೆ

ಬೆಂಗಳೂರು, ಜ.29, ದೃಷ್ಟಿ ವಿಶಿಷ್ಟ ಚೇತನ ವಿದ್ಯಾರ್ಥಿ ಸಮುದಾಯದ ಶಿಕ್ಷಣಕ್ಕೆ ಇರುವ ಅಡೆತಡೆಗಳನ್ನು ತೊರೆದು ಹಾಕುವಲ್ಲಿ ಸಮರ್ಥನಂ ಸಂಸ್ಥೆ ನಿರಂತರ ಪ್ರಯತ್ನಿಸುತ್ತಿದ್ದು, ಇದೀಗ ಇಂತಹ ವಿದ್ಯಾರ್ಥಿಗಳಿಗಾಗಿ ಸಂಸ್ಥೆಯಲ್ಲಿ ಅತ್ಯಾಧುನಿಕ ಬ್ರೈಲ್ ಮುದ್ರಕ ಯಂತ್ರವನ್ನು ಸ್ಥಾಪಿಸಿದೆ. ಈ ಯಂತ್ರವನ್ನು  ಒಕ್ವೆನ್ ಫೈನಾನ್ಷಿಯಲ್‌ನ ಕೊಡುಗೆಯಾಗಿ ನೀಡಿದೆ.  

 ಈ ಕುರಿತು ವಿವರ ನೀಡಿರುವ ಸಮರ್ಥನಂ ಸಂಸ್ಥಾಪಕ ಮಹಂತೇಶ್ ಅವರು, ಸಮರ್ಥನಂದಲ್ಲಿ  ದೃಷ್ಟಿಹೀನ ಪ್ರತಿಯೊಬ್ಬ ಮಗು, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರವೇಶ ಸಿಗಬೇಕೆಂದು ನಾವು ಬಯಸುತ್ತೇವೆ. ದೃಷ್ಟಿ ಅಂಗವೈಕಲ್ಯ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ವೃತ್ತಿಜೀವನವನ್ನು ಹೊಂದಲು ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಮತ್ತು ಘನತೆ ಮತ್ತು ಸ್ವಾತಂತ್ರ್ಯದೊಂದಿಗೆ ಬದುಕಲು ನಾವು ಪ್ರಯತ್ನಿಸುತ್ತಿದ್ದೇವೆ. ಇದೀಗ ಮುದ್ರಕ ಯಂತ್ರ ಇಲ್ಲಿ ಸ್ಥಾಪನೆಯಾಗಿರುವುದರಿಂದ ಇಲ್ಲಿ ಕಲಿಯುತ್ತಿರುವ ಸುಮಾರು 500ಕ್ಕೂ ಅಧಿಕ ವಿಶಿಷ್ಟ ಚೇತನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.  

  ಓಕ್ವೆನ್ ಫೈನಾನ್ಷಿಯಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಗ್ಲೆನ್ ಮೆಸ್ಸಿನಾ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೂನ್ ಕ್ಯಾಂಪ್ಬೆಲ್, ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಹಣಕಾಸು ಅಧಿಕಾರಿ ಡೆನ್ನಿಸ್ ಜಿಲೆನ್ಯ್ , ಕಾರ್ಯನಿರ್ವಾಹಕ ಉಪಾಧ್ಯಕ್ಷ, ಮುಖ್ಯ ಆಡಳಿತಾಧಿಕಾರಿ, ಮಾನವ ಸಂಪನ್ಮೂಲ ಮತ್ತು ತಿಮೋತಿ ಬಿಸಿನೆಸ್ ಡೆವಲಪ್ಮೆಂಟ್‌ನ ಮುಖ್ಯ  ಅಧಿಕಾರಿ ಜೆ.ಯಾನೋಟಿ, ರವಿ ಎಸ್ ಪಿ ಮತ್ತು ಮನಿಲಾ ಆಪರೇಶನ್ಸ್ ಜೊತೆಗೆ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ  ಮಹಂತೇಶ್ ಕಿವದಾಸನ್ನವರ್ ಯಂತ್ರದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

  

 ತಂತ್ರಜ್ಞಾನದಲ್ಲಿನ ಪ್ರಗತಿಯು ದೃಷ್ಟಿಹೀನರಿಗೆ ಕಲಿಕೆ ಮತ್ತು ಶೈಕ್ಷಣಿಕ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುವಲ್ಲಿನ ಅಡೆತಡೆಗಳನ್ನು ಇಲ್ಲವಾಗಿಸುತ್ತದೆ. ದೃಷ್ಟಿ ಅಂಗವಿಕಲ ಸಮುದಾಯದ ಕಲಿಕೆಯ ಅಗತ್ಯಗಳಿಗೆ ಬ್ರೈಲ್ ಯಂತ್ರ ಸಹಾಯ ಮಾಡುತ್ತದೆ. ಸಮರ್ಥನಂನಲ್ಲಿ ಬ್ರೈಲ್ ಮುದ್ರಕದ ಸ್ಥಾಪನೆಯು ಪುಸ್ತಕಗಳು, ಪಠ್ಯಪುಸ್ತಕಗಳು ಮತ್ತು ಇತರ ಸಂಪನ್ಮೂಲಗಳಿಗೆ ಸುಲಭವಾಗಿ ಪ್ರವೇಶಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

  

     ಸಮರ್ಥನಂ, ವಿಕಲಚೇತನರಿಗೆ ತಂತ್ರಜ್ಞಾನದ ಬಳಕೆಯನ್ನು ಸುಲಭವಾಗುವಂತೆ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ತಂತ್ರಜ್ಞಾನವನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ಬ್ರೈಲ್‌ನಲ್ಲಿ ಮಾಹಿತಿಯ ಭಂಡಾರವನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಬ್ರೈಲ್ ಮುದ್ರಕವನ್ನು ಸ್ವೀಕರಿಸಲು ಸಮರ್ಥನಂ ತಂಡವು ಸಂತೋಷ ಪಡುತ್ತದೆ. ವಿದ್ಯಾರ್ಥಿಗಳ ಜೀವನವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಒಕ್ವೆನ್ ಫೈನಾನ್ಷಿಯಲ್ಸ್ ಗೆ ಕೃತಜ್ಞರಾಗಿರುತ್ತೇವೆ  ಎಂದು ತಿಳಿಸಿದರು.