ಉಕ್ಕಿ ಹರಿಯುತ್ತಿದೆ ಬ್ರಹ್ಮಪುತ್ರ: ಅಸ್ಸೋಂನಲ್ಲಿ ಪ್ರವಾಹದ ಭೀತಿ

ಗುವಾಹಟಿ: ಭಾರತಕ್ಕೆ ಈ ವರ್ಷ ಜಲಗಂಡ ಆವರಿಸಿರುವಂತಿದೆ. ಭಾರಿ ಮಳೆಯಿಂದಾಗಿ ಹಲವಾರು ರಾಜ್ಯಗಳು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದು, ಅಸ್ಸೋಂನಲ್ಲಿಯೂ ಈಗ ಪ್ರವಾಹ ಭೀತಿ ಎದುರಾಗಿದೆ. 

ಭಾರತದಂತೆಯೇ ಚೀನಾದಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ತ್ಸಾಂಗ್ಪೊ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನದಿ ಮೂಲಕ 9020 ಕ್ಯುಮೆಕ್ ನೀರು ಹರಿಸಿದ್ದರಿಂದ ಅರುಣಾಚಲಪ್ರದೇಶದ ಸಿಯಾಂಗ್/ ಬ್ರಹ್ಮಪುತ್ರ ನದಿಯ ನೀರಿನ ಮಟ್ಟವೂ ಹೆಚ್ಚಿದೆ. ಅಪಾಯದ ಮುನ್ಸೂಚನೆಯಿಂದಾಗಿ ಸಿಯಾಂಗ್ ಜಿಲ್ಲಾಡಳಿತ ನದಿ ಪಾತ್ರದ ಹಾಗೂ ತಗ್ಗು ಪ್ರದೇಶದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದೆ. ನದಿಗಿಳಿದು ಈಜುವುದು, ಮೀನುಗಾರಿಕೆ ಮತ್ತಿತರ ಚಟುವಟಿಕೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರವಾಹದ ಮುನ್ಸೂಚನೆ ನೀಡಿರುವುದರಿಂದ ಸೂಕ್ಷ್ಮ ವಲಯಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿರುವ ಜನರನ್ನು ಸ್ಥಳಾಂತರಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ.  

ನಿನ್ನೆ ಮಧ್ಯಾಹ್ನದ ವೇಳೆಗೆ ನದಿ ನೀರಿನ ಮಟ್ಟ 153.27 ಮೀಟರ್ನಷ್ಟಿತ್ತು. ಆಪಾಯದ ಮಟ್ಟ 153.960 ಮೀಟರ್ ಆಗಿರುವುದರಿಂದ ಮತ್ತಷ್ಟು ನೀರಿನ ಮಟ್ಟ ಹೆಚ್ಚಿದರೆ ಯಾವುದೇ ಸಮಯದಲ್ಲಾದರೂ ಪ್ರವಾಹ ಸಂಭವಿಸಬಹುದು ಎನ್ನಲಾಗಿದೆ.  

19 ಮಂದಿ ರಕ್ಷಣೆ: 

ಸಿಯಾಂಗ್ನ  ದ್ವೀಪ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 30 ಸಂತ್ರಸ್ತರ ಪೈಕಿ 19 ಮಂದಿಯನ್ನು ಭಾರತೀಯ ವಾಯುಪಡೆ ರಕ್ಷಿಸಿದೆ. ಪ್ವಾಹರಕ್ಕೆ ಸಿಲುಕಿದವರನ್ನು ರಕ್ಷಿಸುವ ಕಾಯರ್ಾಚರಣೆ ಮುಂದುವರೆದಿದೆ. 

ಸೇನೆಯ  ರಕ್ಷಣಾ ಕಾಯರ್ಾಚರಣೆಗೆ  ಅರುಣಾಚಲಪ್ರದೇಶದ  ಮುಖ್ಯಮಂತ್ರಿ ಪ್ರೇಮ ಖಂಡು ಅವರು ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.