ನವದೆಹಲಿ, ಡಿ 26 ವಿಶ್ವದ ನಾನಾಕಡೆ ಹಲವಡೆ ಗುರುವಾರ ಬೆಳಗ್ಗೆ ಕಂಕಣ
ಸೂರ್ಯಗ್ರಹಣ ಗೋಚರಿಸಿದೆ, ಆದರೆ ಗ್ರಹಣವನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೋವು, ಅಳಲು
ತೋಡಿಕೊಂಡಿದ್ದಾರೆ. ಆಸ್ಟ್ರೇಲಿಯಾ,ಸೌದಿ,
ಅಬುದಾಬಿ, ಕತಾರ್ , ಫಿಲಿಪ್ಪೆನ್ಸ್ , ಚೀನಾ, ಇಂಡೋನೇಷ್ಯಾ, ಸೋಮಾಲಿಯಾ, ಶ್ರೀಲಂಕಾ, ಜಿಂಬಾಬ್ವೆ,
ಪೊಲೆಂಡ್, ಬಾಂಗ್ಲಾದೇಶ, ಮಲೇಷ್ಯಾ, ಭೂತಾನ್ , ಅಫ್ಘಾನಿಸ್ತಾನ, ಮಾರಿಷಸ್, ಸುಮಾತ್ರ, ಬೆಲಾರಸ್ ಮತ್ತಿತರ
ರಾಷ್ಟ್ರಗಳಲ್ಲೂ ಗ್ರಹಣ ಗೋಚರಿಸಿದೆ.ದೇಶದ ಕೊಚ್ಚಿ,
ಕಾಸರಗೋಡು, ತಿರುವನಂತಪುರ, ಹರಿದ್ವಾರ ಚಂಡಿಗಡ, ಚೆನ್ನೈ, ಅಹ್ಮದಾಬಾದ್, ಅಜ್ಮೀರ್, ಭುವನೇಶ್ವರ್, ಮುಂಬೈನಲ್ಲೂ ಸೂರ್ಯಗ್ರಹಣ ಕಾಣಿಸಿದೆ..ದೆಹಲಿ ಮತ್ತು
ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣದ ಕಾರಣದಿಂದಾಗಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಗಿತ್ತು. ಸೂರ್ಯಗ್ರಹಣ ಆರಂಭದಲ್ಲಿ ಕೇರಳ, ತಮಿಳುನಾಡು,
ಕರ್ನಾಟಕದ ಕೆಲವು ನಗರಗಳಲ್ಲಿ ಗೋಚರಿಸಿತು.ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಕಣ ಸೂರ್ಯಗ್ರಹಣ
ವೀಕ್ಷಿಸಿದರು. " ಭಾರತದ ಎಲ್ಲರಂತೆ ನಾನು ಕೂಡಾ ಗ್ರಹಣ ವೀಕ್ಷಿಸಲು ಉತ್ಸುಕನಾಗಿದ್ದೆ. ದುರದೃಷ್ಟವಶಾತ್,
ಮೋಡದ ಕವಿದ ವಾತಾವರಣದಿಂದ ಸೂರ್ಯಗ್ರಹಣ ಸರಿಯಾಗಿ
ನೋಡಲು ಸಾಧ್ಯವಾಗಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಬೇರೆ ಪ್ರದೇಶಗಳ ಗ್ರಹಣದ ನೇರ ಪ್ರಸಾರವನ್ನು ನೋಡಿ,
ಖಗೋಳ ಶಾಸ್ತ್ರಜ್ಞರೊಂದಿಗೆ ಇದರ ಬಗ್ಗೆ ಮಾಹಿತಿ ಪಡೆದಿರುವುದಾಗಿ ಪ್ರಧಾನಿ
ತಿಳಿಸಿದ್ದಾರೆ.