ದುಬೈ, ಅ 10: ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರನ್ನು ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೇಯ್ನ್ ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ತೋರುವ ಮುಂಚೂಣಿ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ಶೈಲಿಯ ತಂತ್ರಗಳು ಸ್ವಾಭಾವಿಕವಾಗಿ ಬಂದಿರುವುದಾಗಿದೆ. ಅವರು ಕ್ರೀಸ್ನಲ್ಲಿ ಬೌಲರ್ ಗಳಿಗೆ ಎಡ, ಬಲ ಹಾಗೂ ಪಿಚ್ನ ಸೆಂಟರ್ ನಲ್ಲಿ ತುಂಬಾ ಗಲಿಬಿಲಿ ಉಂಟು ಮಾಡುತ್ತಾರೆ. ಅವರು ಬ್ಯಾಟಿಂಗ್ ಅದ್ಭುತವಾಗಿದ್ದು, ಅವರು ಬೌಲರ್ ಎಸೆಯುವ ಚೆಂಡನ್ನು ಕಣ್ಣಿನಲ್ಲಿ ಪರಿಗಣಿಸುವ ರೀತಿ ಅತ್ಯುತ್ತಮವಾಗಿದೆ. ಅವರ ಅಭ್ಯಾಸದ ವೇಳೆ ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಾರೆ ಎಂದು ಸ್ಟೇಯ್ನ್ ಹೇಳಿದರು. ಇತ್ತೀಚೆಗೆ ಮುಕ್ತಾಯವಾದ ಆಷಸ್ ಟೆಸ್ಟ್ ಸರಣಿಯಲ್ಲಿ 30ರ ಪ್ರಾಯದ ಸ್ಮಿತ್ ಅದ್ಭುತ ಪ್ರದರ್ಶನ ತೋರಿದ್ದರು. 774 ರನ್ ಗಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಬ್ಯಾಟ್ಸ್ ಮನ್ ಎನಿಸಿಕೊಂಡರು. ಈ ದಶಕದ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮುಂಚೂಣಿ ಆಟಗಾರ ಅವರಾಗಿದ್ದಾರೆ. ಸ್ಮಿತ್ಗೆ ಯಾವ ಜಾಗದಲ್ಲಿ ಬೌಲಿಂಗ್ ಮಾಡಬೇಕೆಂಬುದು ನಿಜಕ್ಕೂ ಗೊತ್ತಿಲ್ಲ. ಇದರ ಬಗ್ಗೆ ಇಂಗ್ಲೆಂಡ್ ಬೌಲರ್ ಗಳು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವರು ಯಾವ ರೀತಿ ಬೌಲಿಂಗ್ ಮಾಡಿದರೂ ಸ್ಮಿತ್ ಲೀಲಾಜಾಲವಾಗಿ ರನ್ ಕದಿಯುತ್ತಿದ್ದರು. ನಾನು ಮತ್ತೊಮ್ಮೆ ಅವರ ವಿರುದ್ಧ ಟೆಸ್ಟ್ ಪಂದ್ಯವಾಡುವುದಿಲ್ಲ ಎಂಬ ಬಗ್ಗೆ ನಿಜಕ್ಕೂ ಖುಷಿ ಇದೆ ಎಂದು ಡೇಲ್ ಸ್ಟೇಯ್ನ್ ಹೇಳಿರುವುದನ್ನು ಎಸ್ಪಿಎನ್ ಕ್ರಿಕ್ಇನ್ಪೋ ವರದಿ ಮಾಡಿದೆ. ಡೇಲ್ ಸ್ಟೇಯ್ನ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 93 ಪಂದ್ಯಗಳಿಂದ 439 ವಿಕೆಟ್ ಕಿತ್ತಿದ್ದಾರೆ. 125 ಏಕದಿನ ಪಂದ್ಯಗಳಲ್ಲಿ 196 ಹಾಗೂ 44 ಟಿ-20 ಪಂದ್ಯಗಳಿಂದ 61 ವಿಕೆಟ್ ಪಡೆದುಕೊಂಡಿದ್ದಾರೆ. ಈಗಾಗಲೇ ಡೇಲ್ ಸ್ಟೇಯ್ನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.