ವೀರರಾಣಿ ಚೆನ್ನಮ್ಮ ಮರವಣಿಗೆಗೆ ಬೊಮ್ಮಾಯಿ ಚಾಲನೆ

ಶಿಗ್ಗಾವಿ : ಪಟ್ಟಣದ ದ್ಯಾಮವ್ವನ ಪಾದಗಟ್ಟಿಯ ಹತ್ತಿರ ವೀರರಾಣಿ ಕಿತ್ತೂರ ಚೆನ್ನಮ್ಮನ 196 ನೇ ಜಯಂತಿಯ ನಿಮಿತ್ಯ ನೆಡೆದ ಮೆರವಣಿಗೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗಂಜೀಗಟ್ಟಿಯ ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು ವೀರರಾಣಿ ಕಿತ್ತೂರ ಚೆನ್ನಮ್ಮನ ಭಾವಚಿತ್ರಕ್ಕೆ ಫಲ ಪುಷ್ಪವನ್ನು ಸಮರ್ಪಣೆ ಮಾಡಿದರು. ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ವಿರೇಶ ಆಜೂರ, ಶಿವಾನಂದ ಬಾಗೂರ, ಗಂಗಣ್ಣ ಸಾತಣ್ಣನವರ, ತಿಪ್ಪಣ್ಣಾ ಸಾತಣ್ಣವರ, ಸಂಗಮೇಶ ಕಂಬಾಳಿಮಠ,ಬಸಲಿಂಗಪ್ಪ ನರಗುಂದ, ಮಂಜುನಾಥ ಮಣ್ಣಣ್ಣನವರ, ಸಂಜೀವ ಮಣ್ಣಣ್ಣನವರ, ಪ್ರಕಾಶ ಹಾದಿಮನಿ, ದೇವಣ್ಣಾ ಚಾಕಲಬ್ಬಿ, ಮಂಜುನಾಥ ದುಬೆ, ಕನರ್ಾಟಕ ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ಸುಭಾಸ ಚವ್ಹಾಣ, ರಮೇಶ ವನಹಳ್ಳಿ, ಪಕ್ಕೀರಪ್ಪ ಕುಂದೂರ,ಸಿದ್ರಾಮಗೌಡ್ರ ಮೆಳ್ಳಾಗಟ್ಟಿ,ಶಿವಾನಂದ ಮ್ಯಾಗೇರಿ, ರೇಣುಕನಗೌಡ ಪಾಟೀಲ, ಬಸವರಾಜ ಜೇಕಿನಕಟ್ಟಿ, ಕರೆಯಪ್ಪ ಕಟ್ಟಿಮನಿ, ಕೊಟ್ರಪ್ಪ ನಡೂರ, ಕಿರಣ ಅವರಾದಿ ಮುಂತಾದ ಸಮಾಜದ ಗಣ್ಯಮಾನ್ಯರು ಉಪಸ್ಥಿತರಿದ್ದರು.