ಬಿಣಗಾ ಕಟ್ಟಡದಲ್ಲಿ ಬಾಂಬ್ ಸ್ಪೋಟ : 37 ಜನರ ರಕ್ಷಣೆ
ಕಾರವಾರ 12 : ಬಿಣಗಾ ಗ್ರಾಸಿಂ ಕಾರ್ಖಾನೆ ನೌಕರರ ವಸತಿ ಕಟ್ಟಡದಲ್ಲಿ ಬಾಂಬ್ ಸ್ಪೋಟವಾದ ಸುದ್ದಿ ಸೋಮವಾರ 4 ಗಂಟೆಗೆ ಜಿಲ್ಲಾಡಳಿತಕ್ಕೆ ತಲುಪುತ್ತಿದ್ದಂತೆ, ಹತ್ತು ನಿಮಿಷಗಳಲ್ಲಿ ಆಗ್ನಿ ಶಾಮಕದಳ, ಪೊಲೀಸರು, ಎನ್ ಡಿ ಆರ್ ಎಫ್ ತಂಡ ಹಾಗೂ ಎನ್ ಎಸ್ ಎಸ್ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದವು. 7 ಅಂಬುಲೆನ್ಸಗಳು ಸ್ಥಳಕ್ಕೆ ಆಗಮಿಸಿದವು. ವಸತಿ ಗೃಹದಲ್ಲಿ ಸಿಲುಕಿದ್ದ 37 ಜನರನ್ನು ರಕ್ಷಿಸಲು ಆಗ್ನಿ ಶಾಮಕದಳ ಕಟ್ಟಡವನ್ನು ಪ್ರವೇಶ ಮಾಡಿತು. ಕಟ್ಟಡದಲ್ಲಿದ್ದ ದಟ್ಟ ಹೊಗೆಯನ್ನು ಹಾಗೂ ಅಲ್ಪ ಪ್ರಮಾಣದ ಬೆಂಕಿ ಆರಿಸಲು ಯಶಸ್ವಿಯಾಯಿತು. ಏಣಿ ಬಳಸಿ ಕಟ್ಟಡದ ಎರಡನೇ ಮಹಡಿ ತಲುಪಿದ ಆಗ್ನಿ ಶಾಮಕದಳ , ಗಾಯಗೊಂಡವರನ್ನು ಸ್ಟ್ರೆಕ್ಚರ್ ಮೂಲಕ ಅಂಬುಲೆನ್ಸಗೆ ಸಾಗಿಸಿತು. ಎನ್ ಡಿ ಆರ್ ಎಫ್, ಪೊಲೀಸರು ಇವರಿಗೆ ನೆರವಾದರು. 17 ಜನ ಮಹಿಳೆಯರನ್ನು ಮಹಿಳಾ ಪೊಲೀಸರು ರಕ್ಷಿಸಿ ಕಟ್ಟಡದದಿಂದ ಕರೆ ತಂದರು. ಕಟ್ಟಡದ ಒಳಗೆ ಇದ್ದ37 ಜನರಲ್ಲಿ , ತೀವ್ರಗಾಯಗೊಂಡನಾಲ್ವರನ್ನು ಕಾರವಾರ ಕ್ರಿಮ್ಸಗೆ ಸಾಗಿಸಲಾಯಿತು. 33 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಡಾಗ್ ಸ್ಕ್ವಾಡ್ ಆಗಮನ ಜನರನ್ನು ರಕ್ಷಿಸಿದ ಬೆನ್ನ ಹಿಂದೆಯೇ ಡಾಗ್ ಸ್ಕ್ವಾಡ್ ಆಗಮಿಸಿ, ಕಟ್ಟಡದ ಒಳಗೆ ಹೊರಗೆ ಸ್ಪೋಟಕ ಪರೀಶೀಲಿಸಿತು. ಕಟ್ಟಡದ ಒಳಗೆ ಸ್ಪೋಟವಾಗದೆ ಉಳಿದಿದ್ದ ಸ್ಪೋಟಕವನ್ನು ಹುಡುಕಿತು. ನಂತರ ಅದನ್ನು ನಿಷ್ಕ್ರಿಯ ಮಾಡಲಾಯಿತು. ಪೊಲೀಸರು, ಅಗ್ನಿಶಾಮಕದಳ, ಕೋಸ್ಟ ಗಾರ್ಡ, ಎನ್ ಡಿಆರ್ ಎಫ್, ಎನ್ ಎಸ್ ಎಸ್,ಗೃಹ ರಕ್ಷಕದಳ ಸೇರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಮುನ್ನೂರು ಸಿಬ್ಬಂದಿ ಭಾಗವಹಿಸಿದ್ದರು . ಯುದ್ಧ ಸನ್ನಿವೇಶದಲ್ಲಿ ಕಟ್ಟಡದ ಮೇಲೆ ಬಿದ್ದ ಬಾಂಬ್ ದಾಳಿಯಅಣಕು ಕಾರ್ಯಾಚರಣೆ ಯಶಸ್ವಿಯಾಯಿತು. ಕೋರ್ಟ್ ಕಟ್ಟಡಕ್ಕೆ ಬಾಂಬ್ ದಾಳಿಯ ಅಣಕು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಈ ಕಾರ್ಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ. ಸಂಜೀವ ಕುಮಾರ್. ಎಚ್.ಆರ್ .ವಿಭಾಗ.ಗ್ರಾಸಿಂ ಕಾರ್ಖಾನೆ. ಬಿಣಗಾ ಆಗ್ನಿ ಶಾಮಕದಳ ತನ್ನ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದೆ. ಕಾರ್ಯಾಚರಣೆ ತೃಪ್ತಿ ತಂದಿದೆ.