ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನಬಸವರಾಜ ಎಸ್ ಕುರುವತ್ತಿ.
ರಾಣೇಬೆನ್ನೂರು 12 : ಇಲ್ಲಿನ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೇ 15 ರಂದು ಮುಂಜಾನೆ 10:30ಕ್ಕೆ ಇಲ್ಲಿನ ರೈಲ್ವೆ ಸ್ಟೇಷನ್ ಹತ್ತಿರದ ವರ್ತಕರ ಸಂಘದ ಸಭಾಭವನದಲ್ಲಿ ನೆರವೇರಲಿದೆ ಎಂದು ಸಂಘದ ಅಧ್ಯಕ್ಷ ಗದಿಗೆಪ್ಪಗೌಡ ಜಿ. ಹೊಟ್ಟಿಗೌಡರ ಹೇಳಿದರು. ಅವರು ಸೋಮವಾರ ಇಲ್ಲಿನ ವರ್ತಕರ ಸಂಘದ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನಬಸವರಾಜ ಎಸ್ ಕುರುವತ್ತಿ. ಉಪಾಧ್ಯಕ್ಷರಾಗಿ ಉಮಾಪತಿ ಹೊನ್ನಾಳಿ. ಗೌರವ ಕಾರ್ಯದರ್ಶಿಯಾಗಿ ಮಾಲತೇಶ ಟಿ ಚಳಗೇರಿ ಆಯ್ಕೆಯಾಗಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚನ್ನಬಸವರಾಜ ಕುರುವತ್ತಿ. ಉಮಾಪತಿ ಹೊನ್ನಾಳಿ. ಮಾಲತೇಶ್ ಚಳಗೇರಿ. ರಾಜು ಶಿವಲಿಂಗಪ್ಪನವರ. ನಿಂಗನಗೌಡ ಪಾಟೀಲ್. ರಾಜು ಗೊಂದಕರ್. ಅಶೋಕ್ ನರಸಗೊಂಡರ. ಮಾಂತೇಶ್ ಕುರುಗೋಡಪ್ಪನವರ. ಚನ್ನಬಸಪ್ಪ ಬಾದಾಮಿ. ಮಂಜುನಾಥ್ ಬೂದಿಹಾಳ. ಚಂದ್ರು ಸಣ್ಣಗೌಡರ್ . ಕಿರಣ್ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.