ಬುದ್ಧನ ಪಂಚಶೀಲ ತತ್ವ ಪ್ರತಿಯೊಬ್ಬರು ಅಳವಡಿಸಿಕೊಳ್ಳಿ ಶಾಸಕ ಬಸವರಾಜ್ ಶಿವಣ್ಣನವರು
.ಬ್ಯಾಡಗಿ 12 : ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಭಗವಾನ್ ಬುದ್ಧನ ಬೋಧಿಸಿರುವ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ಶಾಸಕ ಬಸವರಾಜ್ ಶಿವಣ್ಣನವರು ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವಣದಲ್ಲಿ ಬುದ್ಧನ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಬುದ್ಧನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾತನಾಡಿದವರು ಸಮಾನತೆಯ ಸಮಾಜ ಕಟ್ಟಲು ಸಿದ್ದಾರ್ಥ ಬಯಸಿದ್ದ ಮೇಲು ಕೀಳು ಹಿಂಸೆ ಮಾಡಬಾರದು ಆಸೆಯೇ ದುಃಖಕ್ಕೆ ಮೂಲ ಎಂದು ಮನುಕುಲಕ್ಕೆ ಬೋಧಿಸಿದ್ದಾನೆ ಯುವಜನತೆ ಬುದ್ಧನ ಜೀವನ ಚರಿತ್ರೆ ಅಧ್ಯಯನ ಮಾಡುವಂತೆ ಸಲಹೆ ನೀಡಿದರು. ಜಿಲ್ಲಾ ಕಾರ್ಯನಿರತ ಧ್ವನಿ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ತಾವು ಬೌದ್ಧ ಧರ್ಮ ಸ್ವೀಕಾರ ಮಾಡುವುದಕ್ಕಿಂತ 20 ರಿಂದ 25 ವರ್ಷಗಳ ಹಿಂದೆ ನಾನು ಹಿಂದೂವಾಗಿ ಹುಟ್ಟಿದ್ದೇನೆ ಅದಕ್ಕೆ ಕಾರಣ ನಾನಲ್ಲ ಆದರೆ ಇಲ್ಲಿರುವ ಕೀಳರಿಮೆ ಮೂಡನಂಬಿಕೆ ಕಂದಾಚಾರಗಳಲ್ಲಿ ಅಗತ್ಯತೆಯನ್ನು ನಾನು ಒಪ್ಪುತ್ತಿಲ್ಲ ಆದ್ದರಿಂದ ನಾನು ಈ ಧರ್ಮದಲ್ಲಿ ಉಳಿಯುವುದಿಲ್ಲ ಎಂದು 1956ರ ಆಗಸ್ಟ್ 14ರಂದು ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಫಿರೋಜ್ ಷಾ ಸೊಮನಕಟ್ಟಿ.ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ . ದುರ್ಗೆಶ ಗೋಣೆಮ್ಮನವರ.ರವಿ . ಚಂದ್ರಶೇಖರ ಗದಗಕರ.ರುದ್ರಣ್ಣ ಹೊಂಕಣದ. ಬಿ ಸಿ ಎಂ ಅಧಿಕಾರಿ ಪ್ರಸಾದಿಮಠ.ತೋಟಗಾರಿಕೆ ಅಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.