ಶಿಗ್ಗಾವಿ23: ಇತ್ತೀಚಿಗೆ ಕಾರವಾರ ತಾಲೂಕಿನ ಕೊರ್ಮಗಡದಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟ ಶಿಗ್ಗಾವಿ ತಾಲೂಕಿನ ಹೊಸೂರ ಗ್ರಾಮದ ಕುಟುಂಬದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 45 ಲಕ್ಷ ರೂಗಳನ್ನು ಒದಗಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲೇಶಪ್ಪ ಚೋಟಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಮಲ್ಲಾಡದ, ಸೋಮು ಬೆಳವಲಕೊಪ್ಪ, ಮಾದೇವಪ್ಪ ತಳವಾರ, ಸುರೇಶ ತಳವಾರ, ರಾಜು ಮುದೆಣ್ಣವರ, ಮಂಜು ಪಾಟೀಲ್, ಕಲ್ಲಪ್ಪ ಚಿಗಳ್ಳಿ, ನಿಂಗಪ್ಪ ಕಮ್ಮಾರ, ಸುರೇಶ ಅರಟಾಳ ಸೇರಿದಂತೆ ಇತರರು ಇದ್ದರು.