ದಿ. ಜಿನ್ನಪ್ಪಣ್ಣಾ ಚೌಗುಲೆ ಅವರ 10ನೇ ಪುಣ್ಯಸ್ಮರಣೆ ನಿಮಿತ್ಯ ರಕ್ತದಾನ ಶಿಬಿರ; ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನ: ಡಾ. ಸಂಜೀವ ಪಾಟೀಲ..!

ದಿ. ಜಿನ್ನಪ್ಪಣ್ಣಾ ಚೌಗುಲೆ ಅವರ 10ನೇ ಪುಣ್ಯಸ್ಮರಣೆ ನಿಮಿತ್ಯ ರಕ್ತದಾನ ಶಿಬಿರ; ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನ: ಡಾ. ಸಂಜೀವ ಪಾಟೀಲ..! Blood donation camp on the occasion of the 10th death anniversary of Dr. Jinnapanna Chowgule; Blood

ಲೋಕದರ್ಶನ ವರದಿ 

ಕಾಗವಾಡ 17 :  ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವುದರಿಂದ ಒಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಜೊತೆಗೆ ರಕ್ತದಾನ ಮಾಡಿದವರ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಹೆಚ್ಚುತ್ತದೆ. ಇಂತಹ ಮಹತ್ತರವಾದ ಕಾರ್ಯವನ್ನು ಕಳೆದ 10 ವರ್ಷಗಳಿಂದ ಲಾಲಬಹಾದ್ದೂರ ಸಹಕಾರಿಯವರು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಚಿಕ್ಕೋಡಿ ದಿಯಾ ಆಸ್ಪತ್ರೆಯ ಡಾ. ಸಂಜೀವ ಪಾಟೀಲ ಹೇಳಿದ್ದಾರೆ. 

ಅವರು ಮಂಗಳವಾರ ದಿ. 17 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಸೌಹಾರ್ದ ಸಹಕಾರಿಯ ಸಂಸ್ಥಾಪಕ ದಿ. ಜಿನ್ನಪ್ಪಣ್ಣಾ ಚೌಗುಲೆ ಅವರ 10 ನೇ ಪುಣ್ಯಸ್ಮರಣೆ ನಿಮಿತ್ಯ ಚಿಕ್ಕೋಡಿಯ ಆದರ್ಶ ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಸಸಿಗೆ ನೀರೇರೆದು, ಚಾಲನೆ ನೀಡಿ, ಮಾತನಾಡುತ್ತಿದ್ದರು. ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ತಯಾರಿಸಲು ಮತ್ತು ಮಾರುಕಟ್ಟೆಯಿಂದ ಖರೀದಿಸಲು ಸಾಧ್ಯವಿಲ್ಲ. ರಕ್ತವನ್ನು ದಾನ ಮಾಡಿದಾಗ ಮಾತ್ರ ಅದು ಇತರರಿಗೆ ಉಪಯೋಗವಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಿ ಎಂದು ಹೇಳಿದರು. 

ಈ ಸಮಯದಲ್ಲಿ ಡಾ. ಸುಧೀರ ಪಾಟೀಲ, ಡಾ. ಸಂಧ್ಯಾ ಪಾಟೀಲ, ಡಾ. ಮಾಹಧವಲ ಭೋಮಾಜ, ಡಾ. ಸುಕುಮಾರ ಚೌಗುಲೆ, ಡಾ. ಅಮೋಲ ಸರಡೆ, ಡಾ. ರಾಜೇಂದ್ರ ಅಕಿವಾಟೆ, ಡಾ. ಜಿತೇಂದ್ರ ಖೋತ, ಡಾ. ರವೀಂದ್ರ ಪಾಟೀಲ, ಡಾ. ರವಿ ಕುರುಂದವಾಡೆ, ಡಾ. ಅಶ್ವೀನಿ ಅಕಿವಾಟೆ, ಸಹಕಾರಿಯ ಅಧ್ಯಕ್ಷ ಭಮ್ಮಣ್ಣ ಚೌಗುಲೆ, ಭಾಹುಸಾಬ ಕುರುಂದವಾಡೆ, ತಾತ್ಯಾಸಾಬ ಚೌಗುಲೆ, ಶಂಕರ ಸವದೆ, ಅಣ್ಣಾಸಾಭ ಚಂದೂರೆ, ಸರ್ಜೇರಾವ ಪಾಟೀಲ, ಅಶೋಕ ಕಾತ್ರಾಳೆ, ಸಮ್ಮೇದ ಕಾತ್ರಾಳೆ ಸೇರಿದಂತೆ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಇಓ ವಿದ್ಯಾಸಾಗರ ಚೌಗುಲೆ ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.