ಬಮರ್ಿಂಗ್ ಹ್ಯಾಮ್, ಸೆ 22 ಸಂಘಟಿತ ಹೋರಾಟ ನಡೆಸಿದ ಎಸೆಕ್ಸ್ ತಂಡ 2019ರ ಟಿ-20 ಬ್ಲಾಸ್ಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ವೋಸ್ಸ್ಟರ್ೆಸ್ಶರ್ೆರ್ ವಿರುದ್ಧ ನಾಲ್ಕು ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಆಯಿತು.
ಇಲ್ಲಿನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ವೋಸ್ಸ್ಟರ್ೆಸ್ಶರ್ೆರ್ ತಂಡ ನಿಗದಿತ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಎಸೆಕ್ಸ್ ತಂಡ 20 ಓವರ್ ಗಳ ಮುಕ್ತಾಯಕ್ಕೆ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ವೋಸ್ಸ್ಟರ್ೆಸ್ಶರ್ೆರ್ ನೀಡಿದ್ದ 146 ರನ್ ಗುರಿ ಹಿಂಬಾಲಿಸಿದ್ದ ಎಸೆಕ್ಸ್ ತಂಡ ಆರಂಭದಲ್ಲೇ ಕ್ಯಾಮರೋನ್ ಡೆಲ್ಪೊಟರ್್ ಅವರ ವಿಕೆಟ್ ಕಳೆದುಕೊಂಡಿತು. ಆದರೂ, ಆರಂಭಿಕ ಬ್ಯಾಟ್ಸಮನ್ ಟಾಮ್ ವೇಸ್ಟ್ಲಿ ಅವರು 36 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇದಾದ ಬಳಿಕ ಮಧ್ಯಮ ಕ್ರಮಾಂಕದ ಡೆನಿಯಲ್ ಲಾರೆನ್ಸ್ 23 ರನ್ ಗಳಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದ್ದರು.
ಕೊನೆಯ ಘಟ್ಟದಲ್ಲಿ ಪಂದ್ಯದ ಅತ್ಯಂತ ರೋಚಕವಾಗಿ ಕೂಡಿತ್ತು. ಅಮೋಘ ಬ್ಯಾಟಿಂಗ್ ಮಾಡಿದ ರವಿ ಬೋಪರ 22 ಎಸೆತಗಳಿಗೆ ಅಜೇಯ 36 ರನ್ ಗಳಿಸಿ ತಂಡವನ್ನು ಕೊನೆಯ ಎಸೆತದಲ್ಲಿ ಗೆಲ್ಲಿಸಿದರು. ಇವರಿಗೆ ಕೊನೆಯಲ್ಲಿ ಸಾಥ್ ನೀಡಿದ್ದ ಸಿಮೋನ್ ಹಾರ್ಮರ್ ಅಜೇಯ 18 ರನ್ ಗಳಿಸಿದ್ದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ವೋಸ್ಸ್ಟರ್ೆಸ್ಶರ್ೆರ್ ತಂಡದ ಪರ ರಿಕಿ ವೆಸೆಲ್ಸ್ 31 ರನ್, ಮೋಯಿನ್ ಅಲಿ 32 ರನ್ ಗಳಿಸಿದರು.
ಎಸೆಕ್ಸ್ ಪರ ಅತ್ಯತ್ತಮ ಬೌಲಿಂಗ್ ಮಾಡಿದ ಸಿಮೋನ್ ಹಾರ್ಮರ್ ಮೂರು ವಿಕೆಟ್ ಪಡೆದರೆ, ಡೇನಿಯಲ್ ಲಾರೆನ್ಸ್ ಹಾಗೂ ರವಿ ಬೋಪರ ತಲಾ ಎರಡು ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್
ವೋಸ್ಸ್ಟರ್ೆಸ್ಶರ್ೆರ್: 20 ಓವರ್ ಗಳಲ್ಲಿ 145/9 (ರಿಕಿ ವೆಸೆಲ್ಸ್ 31, ಮೋಯಿನ್ ಅಲಿ 32; ಸಿಮೋನ್ ಹಾರ್ಮರ್ 16 ಕ್ಕೆ 3, ಡೇನಿಯಲ್ ಲಾರೆನ್ಸ್ 26 ಕ್ಕೆ 2, ರವಿ ಬೋಪರ 30 ಕ್ಕೆ 2)
ಎಸೆಕ್ಸ್: 20 ಓವರ್ ಗಳಲ್ಲಿ 148/ 6 (ರವಿ ಬೋಪರ ಔಟಾಗದೆ 36, ಟಾಮ್ ವೆಸ್ಟ್ಲೆ 36; ಮೊಯಿನ್ ಅಲಿ 22 ಕ್ಕೆ 2, ವೇಯ್ನ್ ಪಾಮರ್ೆಲ್ 34 ಕ್ಕೆ 2 )