ಸ್ವಾತಂತ್ರ್ಯ ಸೇನಾನಿ ಸುಖದೇವ್ ಥಾಪರ್ ಜನ್ಮದಿನ: ಮುಖ್ಯಮಂತ್ರಿ ಸೇರಿ ಗಣ್ಯರ ನಮನ

ಬೆಂಗಳೂರು, ಮೇ 15,ಸ್ವಾತಂತ್ರ್ಯ ಸೇನಾನಿ ಸುಖದೇವ್ ಥಾಪರ್ ಅವರ ಜನ್ಮದಿನವಾದ ಇಂದು ದೇಶಕ್ಕಾಗಿ ಅವರ ಮಹಾನ್ ತ್ಯಾಗವನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಸುಖದೇವ್ ಥಾಪರ್ ಜಯಂತಿಯಂದು ಅವರನ್ನು ಸ್ಮರಿಸೋಣ ಎಂದು ಗೌರವ ಸಲ್ಲಿಸಿದ್ದಾರೆ.ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ತಾಯಿ ಭಾರತೀಯನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಪಾರು ಮಾಡಲು ಹೋರಾಡಿ, ಪ್ರಾಣ ತ್ಯಾಗಮಾಡಿದ ಸುಖದೇವ್ ಥಾಪರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು‌ ಎಂದು ತಿಳಿಸಿದ್ದಾರೆ.