ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನ: ಮುಖ್ಯಮಂತ್ರಿ ಯಡಿಯೂರಪ್ಪ ಗೌರವ ಸಲ್ಲಿಕೆ

ಬೆಂಗಳೂರು, ಫೆ.13,  ಕರ್ನಾಟಕ ರಾಜ್ಯ ರೈತ ಸಂಘದ ನಾಯಕ, ದಿವಂಗತ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಜನ್ಮ ದಿನದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.ರೈತ ಸಂಘದ ನಾಯಕ, ದಿವಂಗತ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಹುಟ್ಟಿದ ದಿನದ ಸಂದರ್ಭದಲ್ಲಿ ರೈತ ಹೋರಾಟಕ್ಕೆ ಅವರ ಕೊಡುಗೆಯನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕರ್ನಾಟಕದ ಚಳವಳಿಗಳ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ದಾಖಲಾದಂಥದ್ದು ಎಂ.ಡಿ.ನಂಜುಂಡಸ್ವಾಮಿಯವರ ನೇತೃತೃದ ರೈತ ಚಳವಳಿ. ರೈತ ಸಂಘದ ಹೋರಾಟಗಳು ಕೇವಲ ಭಾರತ ಅಲ್ಲ, ಪ್ರಪಂಚದ ಅನೇಕ ಕಡೆ ಜನಾಭಿಪ್ರಾಯ ರೂಪಿಸಿದವು, ನಾಡು ಕಂಡ ಆ ಅಪ್ರತಿಮ ಹೋರಾಟಗಾರನಿಗೆ ಹುಟ್ಟುಹಬ್ಬದ ಸ್ಮರಣೆಗಳು ಎಂದು ಬಿ.ಎಸ್.ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.