ಹುಬ್ಬಳ್ಳಿ ಕಲ್ಯಾಣ ನಗರದ ರಂಗಮಂದಿರ ದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ

ಹುಬ್ಬಳ್ಳಿ ಕಲ್ಯಾಣ ನಗರದ ರಂಗಮಂದಿರ ದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ Birth anniversary of Vishwaguru Basavanna celebrated at Kalyana Nagar Theatre, Hubballi

ಲೋಕದರ್ಶನ ವರದಿ 

 ಹುಬ್ಬಳ್ಳಿ 22 : ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವದ ಶುಭ ಸಂದರ್ಭದಲ್ಲಿ ಕಲ್ಯಾಣ ನಗರದ ರಂಗಮಂದಿರ ದಲ್ಲಿ  ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು ಬಸವಣ್ಣನವರು ಅಸಂಖ್ಯಾತ  ಶರಣರನ್ನು ಸೇರಿಸಿಕೊಂಡು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಗಣ್ಯರು ಮಾತನಾಡಿ ಬಸವಣ್ಣನವರ ಕಾಯಕ, ದಾಸೋಹ,  ಸಮಾನತೆ,  ಸ್ತ್ರೀ ಸ್ವಾತಂತ್ರ್ಯ,  ಮುಂತಾದ ಶರಣರ ತತ್ವಗಳನ್ನು ಎಲ್ಲರೂ ಪಾಲಿಸಿದರೆ ಸೌಹಾರ್ಧತೆ ಹಾಗೂ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಸೋಹನ ಸುರೇಶ ಹೊರಕೇರಿ, ಉದ್ಯಮಿ, ಕೋಳಿವಾಡ ಮಾರ್ಬಲ್ಸ್ಘಗ್ರಾನೈಟ್ಸ ಮಾಲಿಕರಾದ ಶಂಕರ ಕೋಳಿವಾಡ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಪ್ರೊ. ಬಿ.ಎಂ ಮೊರಬದ, ಪ್ರೊ ಎಸ್‌.ಎಂ.ಸಾತ್ಮಾರ್, ಮೃತ್ಯುಂಜಯ ಮಟ್ಟಿ, ಚನ್ನಬಸಪ್ಪ ಧಾರವಾಡಶೆಟ್ಟರ್, ದಾಕ್ಷಾಯಣಿ ಕೋಳಿವಾಡ,   ಭಾರತಿ ವಾಲಿ , ಗೀತಾ ದೇಶಳ್ಳಿ, ಸಂಭ್ರಮ, ಸಾಕ್ಷಿ, ಪೂಜಾ,  ಗುರುರಾಜ್ ಶಿವಮೊಗ್ಗಿ, ಮುರಳೀಧರ ಹೆಗಡೆ, ಅಶೋಕ ಹೊಸಮನಿ, ಸಿದ್ದಪ್ಪ ಬೆಣ್ಣೂರ, ಎಫ್ ಆರ್ ಪಾಟೀಲ್, ರವಿ ಮಾಳಗಿ, ಗದಿಗೆಪ್ಪ ಇಟಗಿ, ಮಂಜು, ಪ್ರೀತಮ್, ಮುಂತಾದವರು ಇದ್ದರು.   

 ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆಯ ಮಾಜಿ ಸಹ-ಕಾರ್ಯದರ್ಶಿ, ಉದ್ಯಮಿ, ಕೋಳಿವಾಡ ಮಾರ್ಬಲ್ಸ ್ಘ ಗ್ರಾನೈಟ್ಸ ಮಾಲಿಕರಾದ ಶಂಕರ ಕೋಳಿವಾಡ ಹಾಗೂ ದಾಕ್ಷಾಯಿಣಿ ಕೋಳಿವಾಡ ಅವರ ಸುಪುತ್ರ, ಉತ್ತಮ  ಬ್ಯಾಡ್ಮಿಂಟನ್ ಆಟಗಾರ ಸಂಭ್ರಮ ಶಂಕರ ಕೋಳಿವಾಡ ಅವರು  ಕೆ.ಎಲ್‌.ಇ ಸಂಸ್ಥೆಯ, ಎಮ್‌. ಆರ್‌. ಸಾಖರೆ ಸಿಬಿಎಸ್‌ಇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಕ್ಕೆ    ಸಂಭ್ರಮ ಶಂಕರ ಕೋಳಿವಾಡ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು  ಅಭಿಮಾನದಿಂದ  ಶಾಲು, ಮಾಲಾರೆ​‍್ಣ ಮಾಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ, ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು.   

 ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ  ಬಸವಪ್ರಣೀತ ಲಿಂಗಾಯತ ಧರ್ಮ ಒಂದು ವಿಶ್ವಧರ್ಮ, ಸರ್ವರೂ ಆಚರಿಸಬಹುದಾದ ಸರಳ, ಸಹಜ ಧರ್ಮ. ಕಾಯಕ ದಾಸೋಹದ ಸಹಜ ಪ್ರಧಾನ ಧರ್ಮ.ಏಕ ದೇವೋಪಾಸನೆಯ ಧರ್ಮ.ದೇಹವೇ ದೇವಾಲಯವನ್ನಾಗಿ ಮಾಡಿಕೊಂಡು ದೇವರನ್ನು ತನ್ನೋಳಗೆ ಅನುಭವಿಸುವ ಧರ್ಮ. ತನುಶುಚಿ, ಮನಶುಚಿ, ಭಾವಶುಚಿ ಗೊಳ್ಳಬೇಕಾದರೆ ಶರಣರ ತತ್ವಚಿಂತನೆ ಅತ್ಯವಶ್ಯ ಎಂದು ಹೇಳಿದರು.