ನವದೆಹಲಿ, ಏ ೩, ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಭಾರತಕ್ಕೆ ವಿಶ್ವ ಬ್ಯಾಂಕ್ ಒಂದು ಬಿಲಿಯನ್ ಡಾಲರ್ ತುರ್ತು ನೆರವು ಘೋಷಿಸಿದೆ. ಒಟ್ಟು ೨೫ ಅಭಿವೃದ್ದಿ ಶೀಲ ದೇಶಗಳಿಗೆ ೧.೯ ಬಿಲಿಯನ್ ಡಾಲರ್ ನೆರವು ಪ್ರಕಟಿಸಿರುವ ವಿಶ್ವಬ್ಯಾಂಕ್ , ಈ ಪೈಕಿ ಒಂದು ಬಿಲಿಯನ್ ಡಾಲರ್ ಅನ್ನು ಭಾರತಕ್ಕೆ ಹಂಚಿಕೆ ಮಾಡಿರುವುದಾಗಿ ವಿಶ್ವಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ ಪಾಸ್ ತಿಳಿಸಿದ್ದಾರೆ.ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಈ ನೆರವು ಘೋಷಿಸಿರುವುದಾಗಿ ಅವರು ತಿಳಿಸಿದ್ದು, ಪ್ರಸ್ತುತ ಬಿಕ್ಕಟ್ಟಿನಿಂದಾಗಿ ಬಡ ದೇಶಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಅವರು ಹೇಳಿದ್ದಾರೆ.