ಮಹಾಶಿವಯೋಗಿಗಳವರ 65ನೇ ಹಾಗೂ ಲಿಂಗ್ಯಕ್ಯ ಪೂಜ್ಯ

65th of Mahashivayogis and Lingyakya Pujya

ಮಹಾಶಿವಯೋಗಿಗಳವರ 65ನೇ ಹಾಗೂ ಲಿಂಗ್ಯಕ್ಯ ಪೂಜ್ಯ  

ಹಾವೇರಿ 15: :ಶರಣ ಸಂಸ್ಕೃತಿ ಪಾವನ ತಾಣ ಜಂಗಮ ಸುಕ್ಷೇತ್ರ ಅಗಡಿ ಪ್ರಭುಸ್ವಾಮಿ ಮಠದ ಉಭಯ ಶ್ರೀಗಳಾದ ಲಿಂಗ್ಯಕ್ಯಪೂಜ್ಯ ಮಹಾತಪಸ್ವಿ ರುದ್ರಮುನಿ ಮಹಾಶಿವಯೋಗಿಗಳವರ 65ನೇ ಹಾಗೂ ಲಿಂಗ್ಯಕ್ಯ ಪೂಜ್ಯ ಸಂಗನಬಸವ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಸಂಭ್ರಮದಲ್ಲಿ  ಕೃಷಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೋಣನತಂಬಗಿ ಗ್ರಾಮದ ನಿವಾಸಿ ಡಾ.ಗಂಗಯ್ಯ ಶಾಂತಯ್ಯ ಕುಲಕರ್ಣಿ ಅವರನ್ನು ಶ್ರೀಮಠದ ಪೂಜ್ಯ ಗುರುಸಿದ್ದ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು. 

     ಸನ್ಮಾನಿಸಿ ಮಾತನಾಡಿದ ಅಗಡಿ ಪೂಜ್ಯ ಗುರುಸಿದ್ದ ಮಹಾಸ್ವಾಮಿಗಳು ಡಾ.ಗಂಗಯ್ಯ ಕಳೆದ ಎರಡು ದಶಕಗಳಿಂದ ಕೃಷಿ,ಸಾಹಿತ್ಯ,ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಸಾವಯವ ಕೃಷಿ ಕ್ಷೇತ್ರದಲ್ಲಿನ ಸೇವೆ ಶ್ಲಾಘನೀಯ.ಏಕೆಂದರೆ ಒಂದು ತುತ್ತು ಅನ್ನದ ಹಿಂದೆ ಸಾವಿರಾರು,ಲಕ್ಷಾಂತರ ರೈತರ ಶ್ರಮವಿದೆ. ಸಮಾಜದ ಸಕಲ ಜೀವಿಗೂ ಅನ್ನ ಕೊಡುವ ಅನ್ನದಾತರ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು. ಹತ್ತಿಮತ್ತೂರ ಶ್ರೀಮಠದ ಪೂಜ್ಯ ನಿಜಗುಣ ಮಹಾಸ್ವಾಮಿಗಳು ಹಾಗೂ ಬೆಳ್ಳಟ್ಟಿ ಶ್ರೀಮಠದ ಪೂಜ್ಯ ಬಸವರಾಜ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು.     ಇದೇ ಸಂದರ್ಭದಲ್ಲಿ ಡಾ.ಅನುಷಾ ಚಂದ್ರ​‍್ಪ ಬಸಗೇಣ್ಣಿ ಮತ್ತು ನಾಗರತ್ನ ನಿಂಬಣ್ಣ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿಗಳಾದ ಡಾ.ವಿಜಯಮಾಹಾಂತೇಶ ದಾನಮ್ಮನವರ,ಮಾಜಿ ತಾಲೂಕಾ ಅಧ್ಯಕ್ಷರಾದ ಯಲ್ಲಪ್ಪ ಮಣ್ಣೂರ,ಗುತ್ತಲ ಪಟ್ಟಣ ಪಂಚಾಯತ್ ಸದಸ್ಯರಾದ ಗಣೇಶ ಅರೇಮಲ್ಲಾಪುರ,ನಾಗರಾಜ ಬಸಗೆಣ್ಣಿ ಸೇರಿದಂತೆ ಅನೇಕರಿದ್ದರು.ಶಿಕ್ಷಕ ಮಹಾಂತೇಶ ಬೆಳವಿಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.