ಬೈಲಹೊಂಗಲ ಪುರಸಭೆ: ಸ್ವಚ್ಛತೆಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 18ನೇ ರ್ಯಾಂಕ್

ಬೈಲಹೊಂಗಲ 09: ಸ್ವಚ್ಛ ಸವರ್ೇಕ್ಷಣೆ-2019ರ ಸಮೀಕ್ಷೆದಾರರು ಬೈಲಹೊಂಗಲ ಪುರಸಭೆಯ ಸ್ವಚ್ಛತಾ ಸಮೀಕ್ಷೆಯನ್ನು ಪರಿಶೀಲಿಸಿ 2019ನೇ ಸಾಲಿಗಾಗಿ ಬೈಲಹೊಂಗಲ ಪುರಸಭೆಯ ದೈನಂದಿನ ಸ್ವಚ್ಛತೆ ಕಾರ್ಯಕ್ಕೆ ಬೆಳಗಾವಿ ಜಿಲ್ಲೆಗೆ ಪ್ರಥಮ ರ್ಯಾಂಕ್, ಹಾಗೂ ರಾಜ್ಯಕ್ಕೆ 18ನೇ ರ್ಯಾಂಕ್ ಪಡೆದಿದೆ.

        ಈ ಉನ್ನತ ಸ್ಥಾನಗಳನ್ನು ಪಡೆಯಲು ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾಮರ್ಿಕರ ಕಠಿಣ ಪ್ರರಿಶ್ರಮ ಹಾಗೂ ಪುರಸಭೆಯ ಆರೋಗ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸರ ಅಭಿಯಂತರರು, ಹಿರಿಯ ಮತ್ತು  ಕಿರಿಯ ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಮೇಲ್ವಿಚಾರಕರು ಹಾಗೂ ಕಾಯರ್ಾಲಯದ ಎಲ್ಲಾ ವಿಭಾಗಗಳ ಸಿಬ್ಬಂದಿಗಳ ಅವಿರತವಾಗಿರುವಂತಹ ಪ್ರಯತ್ನ, ದೈನಂದಿನ ಸ್ವಚ್ಛತೆ ಕಾರ್ಯಕ್ಕೆ ಸಹಕಾರ ನೀಡಿದಂತಹ ಸಾರ್ವಜನಿಕರ ಮತ್ತು ಸ್ಥಳೀಯ ಸಂಸ್ಥೆಯ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದಿಂದ ಈ ಸ್ಥಾನವನ್ನು ಪಡೆಯಲು ಸಹಕಾರಿಯಾಗಿದೆ ಎಂದು ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ತಿಳಿಸಿದ್ದಾರೆ.