ರಾಜನಾಥ್ ಸಿಂಗ್, ಮಡಗಾಸ್ಕರ್‌ ರಕ್ಷಣಾ ಸಚಿವರ ನಡುವೆ ದ್ವಿಪಕ್ಷೀಯ ಮಾತುಕತೆ; ಕಡಲ ಭದ್ರತಾ ಸಹಕಾರಕ್ಕೆ ಒತ್ತು

ಲಕ್ನೋ, ಫೆ .6  :    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಡಗಾಸ್ಕರ್‌ನ ರಕ್ಷಣಾ ಸಚಿವ  ಲೆಫ್ಟಿನೆಂಟ್ ಜನರಲ್ ರೊಕೊಟೊನಿರಿನಾ ರಿಚರ್ಡ್ ಅವರೊಂದಿಗೆ ಗುರುವಾರ ದ್ವಿಪಕ್ಷೀಯ  ಮಾತುಕತೆ ನಡೆಸಿದರು.

ಚರ್ಚೆಯ ಸಂದರ್ಭದಲ್ಲಿ,  ಈ ಪ್ರದೇಶದಲ್ಲಿ ಕಡಲ ಭದ್ರತಾ ಸಹಕಾರದಲ್ಲಿ ಸಂಬಂಧಗಳನ್ನು ಹೆಚ್ಚಿಸುವ  ಬಗ್ಗೆ ರಾಜನಾಥ್ ಸಿಂಗ್ ಒತ್ತಿ ಹೇಳಿದರು. 

ಕಡಲ ನೆರೆಹೊರೆಯವರಾಗಿ ವ್ಯಾಪಾರ ಮತ್ತು ವಾಣಿಜ್ಯವು  ಅಭಿವೃದ್ಧಿ ಹೊಂದಲು ಸುರಕ್ಷಿತ ಕಡಲ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ  ಉಭಯ ದೇಶಗಳಿಗಿವೆ ಎಂದು ಅವರು ಹೇಳಿದರು.

ಮಾರ್ಚ್ 2018  ರಲ್ಲಿ ಭಾರತದ ರಾಷ್ಟ್ರಪತಿಯವರು ಮಡಗಾಸ್ಕರ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ  ಸಿಂಗ್, ಐತಿಹಾಸಿಕ ಭೇಟಿಯು ಉಭಯ ದೇಶಗಳ ನಡುವಿನ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧವನ್ನು  ಪುನರುಚ್ಚರಿಸಿದೆ ಎಂದು ಹೇಳಿದರು.

ಭೇಟಿಯ ಸಮಯದಲ್ಲಿ ಸಹಿ ಹಾಕಿದ ಒಪ್ಪಂದವು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಿದರು.

ರಕ್ಷಣಾ  ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಪರಸ್ಪರ ಮಾತುಕತೆಯ ವಿವಿಧ  ಕ್ಷೇತ್ರಗಳನ್ನು ಅನ್ವೇಷಿಸಲು ಡಿಫೆನ್ಸ್‌ ಎಕ್ಸ್‌ಪೋ 2020 ಉಭಯ ದೇಶಗಳಿಗೆ ಒಂದು ವೇದಿಕೆಯನ್ನು  ಒದಗಿಸಲಿದೆ ಎಂದು ರಕ್ಷಣಾ ಸಚಿವರು ಹೇಳಿದರು.

ಭಾರತೀಯ ಸಾಗರ ಕಡಲ ಪ್ರದೇಶದಲ್ಲಿ  ಸುರಕ್ಷತೆಯನ್ನು ಕಾಪಾಡುವಲ್ಲಿ ಭಾರತಕ್ಕೆ ದೊಡ್ಡ ಪಾತ್ರವಿದೆ. ದೇಶದಲ್ಲಿ ಚಂಡಮಾರುತ ಉಂಟಾದ ಸಂದರ್ಭದಲ್ಲಿ ಮಡಗಾಸ್ಕರ್‌ನಲ್ಲಿ ಜನರನ್ನು ರಕ್ಷಿಸಲು ಭಾರತೀಯ ನೌಕಾಪಡೆ ನಡೆಸಿದ 'ಆಪರೇಷನ್  ವೆನಿಲ್ಲಾ'ಕ್ಕಾಗಿ ನಮ್ಮ ಸರ್ಕಾರ ಭಾರತೀಯ ನೌಕಾಪಡೆಗೆ ಇದೇ ವೇಳೆ  ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತದೆ  ಎಂದು  ಲೆಫ್ಟಿನೆಂಟ್ ಜನರಲ್  ರೊಕೊಟೊನಿರಿನಾ ರಿಚರ್ಡ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.

ಈ ವರ್ಷದ ಜೂನ್ 26 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಮಡಗಾಸ್ಕರ್‌ನ ರಕ್ಷಣಾ ಸಚಿವರು ರಾಜನಾಥ್ ಸಿಂಗ್ ಅವರಿಗೆ ಆಹ್ವಾನಿಸಿದ್ದಾರೆ.