ಬೈಕ್ ಕಳ್ಳತನ: ಆರೋಪಿ ಬಂಧನ

ಜಮಖಂಡಿ 09:  ಗ್ರಾಮೀಣ ಠಾಣೆಯ ಪೋಲಿಸರು ಬೈಕ್ ಕಳ್ಳತನ ಮಾಡುತ್ತಿರುವ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ವಿವಿಧ ಕಡೆಗಳಲ್ಲಿ ಬೈಕ್‌ಗಳನ್ಮು ಕಳ್ಳತನ ಮಾಡುತ್ತಿರುವ ಆರೋಪಿಗಳಾದ ಜಮಖಂಡಿಯ ಅರುಣ ವಸಂತ ಪವಾರ(24), ಮೂಡಲಗಿ ತಾಲೂಕಿನ ಅವರಾದಿಯ ದತ್ತಾ ನಾಮದೇವ ಚವ್ಹಾಣ (24),ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದ ಕಿರಣ ದೀಲೀಪ ಸಾಳುಂಕೆ (27) ಎಂಬ ಮೂವರು ಆರೋಪಿಗಳು ಸೇರಿಕೊಂಡು ಜಮಖಂಡಿ, ಬನಹಟ್ಟಿ, ಮಾಹಾಲಿಂಗಪೂರ, ಯಾದವಾಡ ಹೀಗೆ ಮುಂತಾದ ಕಡೆಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದು, ಅವರಿಂದ 9 ಮೋಟಾರ್ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆಂದು ಡಿಎಸ್‌ಪಿ, ಶಾಂತವೀರ ಈ, ಅವರು ಮಾಹಿತಿಯನ್ನು ನೀಡಿದರು. 

ಬಂಧಿತ ಮೂವರು ಆರೋಪಿಗಳು ಬೈಕ್‌ಗಳನ್ನು ಕಳ್ಳತನ ಮಾಡಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು. 

ಜಿಲ್ಲಾ ಎಸ್‌ಪಿ, ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್‌ಪಿಗಳಾದ ಪ್ರಸನ್ನ ದೇಸಾಯಿ, ಮಾಂತೇಶ್ವರ ಜಿದ್ದಿ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿದ್ದು, ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಪಿಎಸ್‌ಐ, ಗಂಗಾಧರ ಪೂಜಾರಿ, ಸಿಬಂಧಿಗಳಾದ ಬಿ,ಪಿ, ಕುಸನಾಳೆ, ಬಿ,ಎಮ್, ಜಂಬಗಿ, ವಿ,ಎಸ್,ಜಾಧವ, ಎಸ್,ಎಸ್,ಮೇಟಿ, ಬಿ,ಎಸ್, ಮಾಳಿ, ಎಮ್,ಎಸ್, ಕನಶೆಟ್ಟಿ, ಎಸ್,ಬಿ,ಬಿರಾದಾರ. ಎಸ್,ಬಿ, ಸನಗೌಡರ, ಎ,ಎಸ್,ಮಾಳಿ, ಪಿ,ಎಸ್,ವಾಲಿಕರ ಸೇರಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಜಿಲ್ಲಾ ಎಸ್‌ಪಿ ಅವರು ಸೂಕ್ತ ಬಹುಮಾನ ನೀಡಿ ಶ್ಲಾಘನೀಸಿದ್ದಾರೆ, ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಂದು ಡಿ,ಎಸ್,ಪಿ, ಶಾಂತವೀರ ಈ, ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.