ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ

Bike parked in front of house stolen: Caught on CCTV camera

ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ

ಹೂವಿನಹಡಗಲಿ  18: ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಸೋಮವಾರ  ಕಳೆದ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್ ಕಳವಾಗಿದ್ದು, ಕದ್ದ ಬೈಕ್ ತಳ್ಳಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.ಗ್ರಾಮದ ತೇರು ಬಜಾರ ಮುಖ್ಯರಸ್ತೆಯಲ್ಲಿ ಸರ್ದಾರ ಮಂಜುನಾಥ ಮನೆ ಮುಂದೆ ನಿಲ್ಲಿಸಿದ್ದರು. 

ಅವರ ಅಳಿಯ ಹಾಲೇಶಗೆ ಸೇರಿದ ಹೊಂಡ ಸ್ಯಾನ್ ಹೊಸ  ಬೈಕ್  ಏಂ.35.ಇಕ. 5066  ಮನೆಯ ಮುಂದೆ ನಿಲ್ಲಿಸಿದ್ದರು. ರಾತ್ರಿ  ಸಮಯದಲ್ಲಿ ಕದ್ದ ಬೈಕನ್ನು ಇಬ್ಬರು ಯುವಕರು ಬೈಕ್ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಂತೋಷ ಅವರ ಕಿರಾಣಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.ಕಳ್ಳತನ ಮಾಡಿದ ಹಳೆ ಬ್ಯೆಕ್ ನ್ನು ಇಟ್ಟಿಗಿ ರಸ್ತೆ ಹಳ್ಳದಲ್ಲಿ ಬಿಟ್ಟು ಹೋಗಿದ್ದಾರೆ. ಹೊಸ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬೈಕ್ ಕದ್ದಿರುವ ಯುವಕ ಕಪ್ಪು ಪ್ಯಾಂಟ್ ಶರ್ಟ್‌ ಹಾಕಿರುವ ದೃಶ್ಯ ಸೆರೆಯಾಗಿದೆ.ಬೈಕ್ ಕಳ್ಳತನವಾಗಿರುವ ಬಗ್ಗೆ ಹಾಲೇಶ ಹಡಗಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.  

ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಬೀಡಿ ಅಂಗಡಿ ಕಳ್ಳತನ . ಬೈಕ್ ಕಳ್ಳತನ ಜತೆಗೆ ಬಸ್ ನಿಲ್ದಾಣ ದಲ್ಲಿರುವ ಸಣ್ಣದ ಪಕ್ಕಿರಗೌಡ ಅವರಿಗೆ ಸೇರಿದ ಬೀಡಿ ಅಂಗಡಿ ಬೀಗ ಮುರಿದು ಮೂರು ಸಾವಿರ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ .