ಬೀದರ್ : ಭಯ- ಅಳುಕಿಲ್ಲದೆ ರಾಜರೋಷ ತಿರುಗಾಟ..!!!

ಬೀದರ್   ಮೇ, 24,  ಬೀದರ್ ನಗರದಲ್ಲಿ  ನಿಷೇಧಾಜ್ಞೆ ಜಾರಿಯಲ್ಲಿ ಇದ್ದರು ನಗರದ ಓಲ್ಡ್ ಸಿಟಿಯಲ್ಲಿ ಜನತೆ ಎಂದಿನಂತೆ  ಓಡಾಟ ಮಾಡುತ್ತಿದ್ದಾರೆ. ಅತಿಹೆಚ್ಚು ಕೊರೊನಾ ಪ್ರಕರಣ ದಾಖಲಾಗಿರುವ  ಬೀದರ್ ನಗರದ ಓಲ್ಡ್ ಸಿಟಿಯಲ್ಲಿ ಲಾಕ್ಡೌನ್ ನಿಯಮ  ಉಲ್ಲಂಘನೆಯಾಗುತ್ತಿದ್ದು ಜನತೆ ಬೇಕಾಬಿಟ್ಟಿಯಾಗಿ ಹೊರಗಡೆ ತಿರುಗಾಡುತ್ತಿದ್ದಾರೆ. ಮುಖ್ಯ ರಸ್ತೆಗಳಲ್ಲಿ ಮಾತ್ರ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದ್ದರೂ   ಶಾಗಂಜ್, ಮುಲ್ತಾನಿ ಕಾಲೂನಿ,  ಸಿದ್ದ ತಾಲೀಮ್ ಬಡಾವಣೆಯಲ್ಲಿ  ಜನ ನಿಷೇಧಾಜ್ಞೆ ನಿಯಮ ಉಲ್ಲಂಘಸಿ ಯಾವುದೆ ಭಯ, ಅಳುಕು ಇಲ್ಲದೆ ರಾರೋಷವಾಗಿ ತಿರುಗಾಡುತ್ತಿದ್ದಾರೆ.