ಸರ್ಕಾರಿ ಶಾಲೆ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ

ಭೂಮಿ ಪೂಜೆ

ಸರ್ಕಾರಿ ಶಾಲೆ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ                                                 

ಕಂಪ್ಲಿ 25: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಅನುದಾನದಡಿಯಲ್ಲಿ ಸುಮಾರು 16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಹೆಚ್ಚುವರಿ ಒಂದು ಶಾಲಾ ಕೊಠಡಿ ಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ ರಮೇಶ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಕುರಿ ನಾಗೇಶ, ಲಿಂಗನಗೌಡ ಇವರು ಶಾಸಕ ಜೆ.ಎನ್‌.ಗಣೇಶ ಅವರ ಅನುಪಸ್ಥಿತಿಯಲ್ಲಿ ಭೂಮಿಪೂಜೆ ಸೋಮವಾರ ನೆರವೇರಿಸಿದರು. 

ನಂತರ ಮುಗು ಸೋಮಶೇಖರ ಮಾತನಾಡಿ, ಶಾಲಾ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಿ, ಮಕ್ಕಳ ಕಲಿಕೆಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಪಂಯ ಅನುದಾನದ ಸುಮಾರು 16 ಲಕ್ಷ ವೆಚ್ಚದ ಹೆಚ್ಚುವರಿ ಶಾಲಾ ಕೊಠಡಿಯನ್ನು ಗುತ್ತಿಗೆದಾರರು ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ, ಎಕೆಂದರೆ ಬಡ ಮಕ್ಕಳ  ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. 

ಜನಪ್ರತಿನಿಧಿಗಳ, ಮುಖಂಡರ ಹಾಗೂ ಎಸ್ಡಿಎಂಸಿಯವರ ಸಹಕಾರದಿಂದಾಗಿ ಶಾಲೆಅಭಿವೃದ್ಧಿ ಪಥದತ್ತಾ ಸಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನಾಗರಾಜ, ಸದಸ್ಯ ಬೂದಾಳ್ ರವಿ, ದೇವರ ಮನೆ ಮಲ್ಲಿಕಾರ್ಜುನ ವದ್ದಿಗೇರಿ ಎಸ್ಡಿಎಂಸಿ ಸದಸ್ಯರಾದ ಗೌಡ್ರು ಷಣ್ಮುಖಪ್ಪ, ಎಂ.ಮೈಲಾರ​‍್ಪ, ಸುರೇಶಗೌಡ, ನಾಗರಾಜ, ಪಂಪಾಪತಿ, ನಿಂಗಪ್ಪ, ಸಂಗಟಿ ಅಂಜಿನಪ್ಪ, ಶಿಕ್ಷಣ ಪ್ರೇಮಿ ಸಿದ್ದಯ್ಯ, ವಿಎಸ್ಕೆಯು ಸಿಂಡಿಕೇಟ್ ಸದಸ್ಯ ಕೆ.ಶಿವಕುಮಾರ್, ಮುಖಂಡರಾದ ಡಿ. ಮಲ್ಲಿಕಾರ್ಜುನ, ಉಪ್ಪಾರಹಳ್ಳಿ ಸತ್ಯಣ್ಣ ಸೇರಿಂತೆ ಶಿಕ್ಷಕರು ಇದ್ದರು. ನ001ಸರ್ಕಾರಿ ಹಿ.ಪ್ರಾ.ಶಾಲೆ.16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಶಾಲಾ ಕೊಠಡಿ ಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಈರಮ್ಮ ಭೂಮಿ ಪೂಜೆ ನೆರವೇರಿಸಿದರು.