ಪೊಲೀಸ್ ಸಿಬ್ಬಂದಿಗೆ 14 ಕಟ್ಟುನಿಟ್ಟಿನ ಸೂಚನೆ ನೀಡಿದ ಭಾಸ್ಕರ್ ರಾವ್

ಬೆಂಗಳೂರು,  ಮಾ.30, ಕೊರೊನಾ ಸೋಂಕು ತಡೆಗಟ್ಟಲು ದೇಶವ್ಯಾಪಿ ಲಾಕ್ ಡೌನ್ ಮಾಡಿದ  ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ 14 ಸೂಚನೆಗಳನ್ನು ನೀಡಿದ್ದಾರೆ.ಅಧಿಕಾರಿ,  ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದೆಯೂ ಇದೇ ರೀತಿಯಾಗಿ  ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದ ಅವರು ಹಾಲು, ಪೇಪರ್, ತರಕಾರಿ ಮಾರಾಟಗಾರರಿಗೆ  ಯಾವುದೇ ತೋಂದರೆ ಆಗದಂತೆ  ನೋಡಿಕೊಳ್ಳಬೇಕು. ಕ್ಯಾಶ್ ಬ್ಯಾಕ್ ಎಟಿಎಂನಲ್ಲಿ  ಕಾರ್ಯನಿರ್ವಹಿಸುವವರಿಗೆ ಪಾಸ್ ಇರಲಿ, ಇಲ್ಲದಿರಲಿ ಅವರನ್ನು ತಡೆಹಿಡಿಯ ಬಾರದು ಎಂದು ತಿಳಿಸಿದ್ದಾರೆ.
ದಿನಸಿ ಅಂಗಡಿಗಳು, ಮಾರ್ಟ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಅದಕ್ಕಾಗಿ ಪೇಂಟ್ ಮಾಡಿಸಬೇಕು ಚಾಕ್ ಪೀಸ್ ನಲ್ಲಿ ಬರೆಯಬಾರದು.  ಪ್ರತಿ  ಪೊಲೀಸ್ ಠಾಣೆಯಲ್ಲಿ ಪಿಆರ್ ಓ ಆಫೀಸ್ ಸೃಜಿಸಿ ಜನರಿಗೆ ಸರಿಯಾಗಿ ಸ್ಪಂದಿಸಬೇಕು ಸಮಸ್ಯೆ  ಸರಿ ಹೋಗಿಲ್ಲ ಅಂದಲ್ಲಿ ಡಿಸಿಪಿ, ಎಸಿಪಿಗಳ ಹತ್ತಿರ ಕಳುಹಿಸಬೇಕು. ಜನರಿಗೆ ಅವಮಾನ  ಮಾಡದೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಎಲ್ಲಾ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳನ್ನು ನಿಲ್ಲಿಸಬೇಕು. ಎಮರ್ಜನ್ಸಿ  ಇದ್ದರೆ ಮಾತ್ರ ಬಿಡಬೇಕು ಆಯಾ ಜಾಗದಲ್ಲಿ ಪೊಲೀಸರೂ ಇರಬೇಕು.
ಈಗಾಗಲೇ ಜಪ್ತಿ  ಮಾಡಿರುವವರ ವಾಹನಗಳ ಮಾಲೀಕರಿಗೆ ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿ ಬಿಡಬೇಕು  ಮತ್ತೆ ಆ ರೀತಿ ಮಾಡಿದರೆ ದ್ವಿಚಕ್ರ ವಾಹನಗಳ ಜೊತೆ ನಾಲ್ಕು ಚಕ್ರಗಳ ವಾಹನ ಕೂಡ  ವಶಪಡಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಬೇಕು.ಎಲ್ಲಾ ಕಡೆ ಪಾಸ್ ಗಳು  ನೀಡಲಾಗಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಇಶ್ಯೂ ಆಗಿದೆ ಇದನ್ನು ಎಸಿಪಿಗಳು  ಪರಿಶೀಲಿಸಬೇಕು. ಊಟ ಪೂರೈಕೆ ಹಾಗೂ ಅಗತ್ಯ ಇರುವವರಿಗೆ ಮಾತ್ರ ಪಾಸ್ ನೀಡಬೇಕು. ಅದನ್ನು  ಇಟ್ಟುಕೊಂಡು ಓಡಾಡೋರನ್ನು ಕೂಡ ಚೆಕ್ ಮಾಡಬೇಕು.
ಪೊಲೀಸರು ಎಲ್ಲಾ ಭಾಗದ ವಿಡಿಯೋ ಚಿತ್ರಣ ಮಾಡಬೇಕು.ನೋ ಲಾಠಿ ಬಂದೋಬಸ್ತ್. ಲಾಠಿ ಉಪಯೋಗಿಸಬೇಡಿ. ಹಾಗೆ ವೆಹಿಕಲೇ ಸೀಜ್ ಮಾಡಿದರೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ಪಿಜಿಗಳ ಮಾಲೀಕರು ತೊಂದರೆ ಕೊಡುತ್ತಿದ್ದರೆ ಅವರಿಗೆ ಎಚ್ಚರಿಕೆ ನೀಡಬೇಕು. ಪಿಜಿಯಲ್ಲೇ ಊಟದ ವ್ಯವಸ್ಥೆ ಮಾಡಬೇಕು.ಪೊಲೀಸ್ ಸಿಬ್ಬಂದಿಗಳು ಮೂರು ಪಾಳಿ ಕೆಲಸ ಮಾಡಬೇಕು. ಅವರಿಗೂ  ವಿಶ್ರಾಂತಿ ಅಗತ್ಯವಿರುವ ಕಾರಣ ಮೂರು ಪಾಳಿ ಕೆಲಸ ಮಾಡಬೇಕು. ಹಾಗೆ ಸಿಬ್ಬಂದಿಗಳು  ಹ್ಯಾಂಡ್ ಸ್ಯಾನಿಟೈಸರ್ ಮಾಸ್ಕ್ ಧರಿಸಬೇಕು. ಡಯಾಲಿಸಿಸ್ ರೀತಿ ಕೆಲವು ವೈದ್ಯಕೀಯ ನೆರವು ಬೇಕಾದವರಿಗೆ ಹೊಯ್ಸಳ ವಾಹನ ಪಿಕಪ್ ಅಂಡ್ ಡ್ರಾಪ್ ಮಾಡಬೇಕು.ಜನರ ಆರೋಗ್ಯಕ್ಕೆ ಸ್ಪಂದಿಸಬೇಕು.  ಬೆಳಗ್ಗಿನ ವಾಯು ವಿಹಾರ ಹೋಗುವವರಿಗೆ ಸರ್ಕಾರ ಕಡಿವಾಣ ಹಾಕಿದೆ. ಗುಂಪಲ್ಲಿ ವಾಯು  ವಿಹಾರ ಹೋಗುವವರಿಗೆ ಮೈಕ್ ನಲ್ಲಿ ಪ್ರಕಟಣೆ ಹೊರಡಿಸಿ ವಾಪಸು ಮನೆಗೆ ಕಳುಹಿಸಬೇಕು.ಬೇರೆ ರಾಜ್ಯಗಳಿಂದ ಬಂದವರಿಗೆ ಸಮಸ್ಯೆಯಾದರೆ ಆಯಾ ಠಾಣೆ ವ್ಯಾಪ್ತಿಗಳ ಪೊಲೀಸರು ಸ್ಪಂದಿಸಬೇಕು. ಇಲ್ಲ ಅಂದರೆ ಡಿಸಿಪಿಗಳ ಗಮನಕ್ಕೆ ತರಬೇಕು. ಯಾರು ಆಹಾರ ಪೂರೈಕೆ ಸಹಾಯ ಮಾಡುತ್ತಾರೋ ಅವರು ತಮ್ಮ ಕೆಲಸ ಮುಗಿಸಿ ವಾಪಸು ಹೋಗಬೇಕು. ಅದಕ್ಕೆ ಪ್ರಚಾರ ಕೊಡಬಾರದು. ಫೋಟೊ ತೆಗೆದುಕೊಳ್ಳಬಾರದು ಎಂದು ಸಿಬ್ಬಂದಿಗೆ ಸೂಚಿಸಿದ್ದಾರೆ.