ಮಂಗಳೂರು, ಏ.9,ಅಬಕಾರಿ ಇಲಾಖೆ ಅಧಿಕಾರಿಗಳು, ಮಂಗಳೂರಿನ ಜಪ್ಪಿನಮೊಗರು ಗ್ರಾಮದ ನ್ಯೂ ಪಡ್ಪು ಎಂಬಲ್ಲಿ ರಿಚರ್ಡ್ ಡಿಸೋಜಾ ಎಂಬವರ ಮನೆ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮೂರುವರೆ ಲೀಟರ್ ಲೀಟರ್ ಭಟ್ಟಿ ಸಾರಾಯಿ ಮತ್ತು ಭಟ್ಟಿ ಸಾರಾಯಿ ತಯಾರಿಕಾ ಸಾಮಾಗ್ರಿಗಳನ್ನು ಜಫ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.ದ.ಕ.ಜಿಲ್ಲಾ ಅಬಕಾರಿ ಡಿಸಿ ಶೈಲಜಾ ಕೋಟೆ, ಡಿವೈಎಸ್‌ಪಿ ಶಿವಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ವಲಯ 2ರ ಅಬಕಾರಿ ಇನ್ಸ್‌ಪೆಕ್ಟರ್ ರತ್ನಾಕರ ರೈಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಆಶಿಸ್, ಸಿಬ್ಬಂದಿಗಳಾದ ಬಸವರಾಜತೋರೆ, ನವೀನ್ ನಾಯ್ಕ್ ಮತ್ತು ಚಾಲಕ ಹರಿಯಪ್ಪಇದ್ದರು.