ಹಾವೇರಿ 06 : ತಾಲೂಕಿನ ಕರಜಗಿ ಗ್ರಾಮದ ಸಾಲು ಮರದ ತಿಮ್ಮಕ್ಕಸಸ್ಯ ಉದ್ಯಾನವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕ್ರಾಂತಿಕಾರಿ ಭಗತ್ ಸಿಂಗ್ ಟ್ಯೂಟೋರಿಯಲ್ಸ್ ಸಂಯುಕ್ತ ಆಶ್ರಯದಲ್ಲಿ ಫೋನ್ ಬಿಡಿ ಪುಸ್ತಕ ಹಿಡಿ ವಿಶೇಷ ಕಾರ್ಯಕ್ರಮ ಜರುಗಿತು.
ಕಚುಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಗಂಗಯ್ಯ ಎಸ್. ಕುಲಕರ್ಣಿ ಮಾತನಾಡಿ ಇಂದು ಮಕ್ಕಳು ಅತಿಯಾಗಿ ಫೋನ್ ಬಳಕೆ ಮಾಡುವದರಿಂದ ಅಭ್ಯಾಸ ಮಾಡುವ ಹವ್ಯಾಸ ಕಡಿಮೆಯಾಗಿ ಆ ಮೂಲಕ ಎಲ್ಲ ತರಗತಿ ವಿದ್ಯಾರ್ಥಿಗಳ ಫಲಿತಾಂಶವು ಕುಂಠಿತವಾಗುತ್ತಿದೆ. ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಪೋಷಕರು ಮಕ್ಕಳನ್ನು ಪೋನಿನಿಂದ ದೂರವಿಟ್ಟು ಅದ್ಯಯನ ಶೀಲರಾಗುವಂತೆ ಎಚ್ಚರಿಕೆ ವಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯುವ ಪತ್ರಕರ್ತರು ಹಾಗೂ ಕಚುಸಾಪ ಸವಣೂರ ತಾಲ್ಲೂಕ ಅಧ್ಯಕ್ಷರಾದ ನಿಂಗಪ್ಪ ಆರೇರ ಮಾತನಾಡಿ ಇಂದು ವಿದ್ಯಾರ್ಥಿಗಳಷ್ಟೆ ಅಲ್ಲ ದೇಶದ ಸಂಪತ್ತಾದ ಯುವಕರು, ಮಹಿಳೆಯರು, ಹಿರಿಯರು ಪೋನಿನ ಗೀಳಿಗೆ ಬಿದ್ದು ತಮ್ಮ ಕ್ರಿಯಾಶೀಲತೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ನಿಜಕ್ಕೂ ಇದು ಉತ್ತಮ ಬೆಳವಣಿಗೆ ಅಲ್ಲ.ಅದರಿಂದ ಮುಕ್ತರಾಗಿ ಕಠಿಣ ಪರಿಶ್ರಮಿಳಾಗಿ ಅರೋಗ್ಯವಂತರಾಗಬೇಕು ಎಂದರು.
ಶಿಕ್ಷಕಿ ರಶ್ಮಿ ಜಿ ಕುಲಕರ್ಣಿ ಮಾತನಾಡಿ ಎಲ್ಲ ಪಾಲಕರು ಫೋನ್ ಮತ್ತು ಟಿವಿ ವೀಕ್ಷಣೆ ಮಾಡುವುದನ್ನು ಕಡಿಮೆ ಮಾಡಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಅದು ಮಕ್ಕಳಿಗೂ ಅನುಕರಣೆಯಾಗುತ್ತದೆ. ವಿಶೇಷವಾಗಿ ರಜಾ ದಿನಗಳಲ್ಲಿ ಅದು ಚಿಕ್ಕ ಮಕ್ಕಳು ದೀರ್ಘ ಕಾಲ ಫೋನ್ ವೀಕ್ಷಣೆ ಮಾಡುವದರಿಂದ ಕಣ್ಣು, ಕಿವಿ ಹಾಗೂ ನರ ದೌರ್ಬಲ್ಯಕ್ಕೆ ಕಾರಣಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುದ್ದು ಮಕ್ಕಳು ಫೋನ್ ಬಿಡಿ ಪುಸ್ತಕ ಹಿಡಿ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಕೂಗಿದರು. ಕುಮಾರಿ ವಿನುತಾ, ಸುಹಾನಾ, ಭವ್ಯ, ಸಂಧ್ಯಾ, ಸುಮನ, ಖುಷಿ, ಆಸ್ತಾ, ಅನುಪಮಾ, ಅಪ್ರಿನ್, ಶಾಂತವೀರಯ್ಯ ಕೆ ಸೇರಿದಂತೆ