ನವದೆಹಲಿ, ನ 27- ಮಹಾರಾಷ್ಟ್ರದಲ್ಲಿ ರಚನೆಗೊಳ್ಳಲಿರುವ 'ಮಹಾ ವಿಕಾಸ್ ಅಘಾಡಿ' ಮೈತ್ರಿ ಕೂಟ ಸರ್ಕಾರ ವಿರುದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ, ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿವಸೇನೆ ಮೇಲೆ ಕೆಂಡಕಾರಿರುವ ಅವರು, ಬಿಜೆಪಿ-ಶಿವಸೇನೆ ಮೈತ್ರಿ ಕೂಟಕ್ಕೆ ಮಹಾರಾಷ್ಟ್ರ ಜನರು ಬಹುಮತ ನೀಡಿ ಗೆಲ್ಲಿಸಿದ್ದರು. ಆದರೆ, ಶಿವಸೇನೆ ಜನಾದೇಶವನ್ನು ಧಿಕ್ಕರಿಸಿ ದ್ರೋಹ ಎಸಗಿದೆ ಎಂದು ತಮ್ಮ ಸರಣಿ ಟ್ವೀಟ್ ಗಳಲ್ಲಿ ಆರೋಪಿಸಿದ್ದಾರೆ.ಚುನಾವಣೆಗೆ ಮುನ್ನ ಬಿಜೆಪಿ ನಡುವೆ ಆಗಿದ್ದ ಒಪ್ಪಂದವನ್ನು ಶಿವಸೇನಾ ಗಾಳಿಗೆ ತೂರಿದೆ. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ತಾವು ಎಂದೂ ಯಾವುದೇ ಭರವಸೆ ನೀಡಿರಲಿಲ್ಲ ಎಂದು ಅಮಿತ್ ಶಾ ಪುನರುಚ್ಚರಿಸಿದ್ದಾರೆ.