ಬಸರಕೋಡ ಗ್ರಾಪಂ ಅಧ್ಯಕ್ಷೆ ವಿರುದ್ಧ ವಿಶ್ವಾಸ ಗೊತ್ತುವಳಿಗೆ ಜಯ

    ಮುದ್ದೇಬಿಹಾಳ,2: ತಾಲೂಕಿನ ಬಸರಕೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಚಂದ್ರಶೇಖರ ಮೇಟಿ ವಿರುದ್ಧ ಗ್ರಾಪಂನ 15 ಸದಸ್ಯರ ಪೈಕಿ 10 ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಇನ್ನೊಬ್ಬ ಸದಸ್ಯರು ಕೈಜೋಡಿಸಿ ಒಟ್ಟು 11 ಸದಸ್ಯರ ಬಲ ದೊರಕಿದ್ದರಿಂದ ಗೆಲುವು ಲಭಿಸಿದೆ. ವಿಜಯಪುರ ಉಪ ವಿಭಾಗಾಧಿಕಾರಿ ರವಿ ಕರಿಲಿಂಗಣ್ಣವರ್ ನೇತೃತ್ವದಲ್ಲಿ ಶುಕ್ರವಾರ ಗ್ರಾಪಂ ಕಚೇರಿಯಲ್ಲಿ ಗ್ರಾಪಂನ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ 15 ಸದಸ್ಯರ ಪೈಕಿ 11 ಸದಸ್ಯರು ಹಾಜರಾಗಿದ್ದರು. ಅಧ್ಯಕ್ಷೆ ಕವಿತಾ ಮತ್ತು ಅವರ 3 ಬೆಂಬಲಿಗರು ಸೇರಿ 4 ಸದಸ್ಯರು ಗೈರು ಹಾಜರಾಗಿದ್ದರು. ಸಭೆ ಪ್ರಾರಂಭಿಸಿದ ಉಪ ವಿಭಾಗಾಧಿಕಾರಿಗಳು ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು. ಈ ವೇಳೆ ಹಾಜರಿದ್ದ ಎಲ್ಲ 11 ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಕೈ ಎತ್ತುವ ಮೂಲಕ ನಿರ್ಣಯ ಅಂಗಿಕಾರವಾಗುವಂತೆ ಮಾಡಿದರು.

ಪ್ರಕ್ರಿಯೆಯಲ್ಲಿ ಗ್ರಾಪಂ ಉಪಾಧ್ಯಕ್ಷ ದೊಡ್ಡಬಸವರಾಜ (ಅಪ್ಪು) ನಾಡಗೌಡ, ಸದಸ್ಯರಾದ ಸೋಮಪ್ಪ ಮಾದರ, ಸುನಂದಾ ಮಾದರ, ರೇಣುಕಾ ಸೂಳಿಭಾವಿ, ಶರಣಮ್ಮ ಪಾಟೀಲ, ಸೋಮಪ್ಪ ಮೇಟಿ, ಗುರುಬಾಯಿ ಬಾಗಲಕೋಟೆ, ಶಂಕ್ರಮ್ಮ ಡಮನಾಳ, ರೇಖಾ ತಳವಾರ, ಯಮನವ್ವ ಚಲವಾದಿ, ಶಿವಯ್ಯ ಕೋರವಾರಮಠ ಹಾಜರಿದ್ದರು.

ಈ ವೇಳೆ ಮುದ್ದೇಬಿಹಾಳ ಸಿಪಿಐ ರವಿಕುಮಾರ ಅವರು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರು. ಅವಿಶ್ವಾಸ ಪ್ರಕ್ರಿಯೆಗೆ ಗ್ರಾಪಂ ಪಿಡಿಓ ಪಿ.ಎಸ್.ಕಸನಕ್ಕಿ, ಕಾರ್ಯದಶರ್ಿ ಅಶೋಕ ಭಜಂತ್ರಿ, ಸಿಬ್ಬಂದಿಗಳಾದ ವಿಜಯಕುಮಾರ ಶೆಟ್ಟಿಮುಂಡೇರಾವ್, ಎಸ್.ಎಸ್.ಅಂಗಡಿ, ಗ್ರಾಮಲೆಕ್ಕಿಗ ಬಿ.ಎಂ.ಮಠಪತಿ ಪ್ರಕ್ರಿಯೆಗೆ ಸಹಕರಿಸಿದರು. 

ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಾಧ್ಯಮದವರಿಗೆ ಅವಕಾಶ ನಿರಾಕರಿಸಲಾಗಿತ್ತು. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಗೆಲುವು ದೊರೆತ ನಂತರ ಸುದ್ದಿಗಾರರೊಂದಿಗೆ ಸೋಮಪ್ಪ ಮೇಟಿ, ದೊಡ್ಡಬಸವರಾಜ ನಾಡಗೌಡ ಮತ್ತಿತರರು ಮಾತನಾಡಿದರು. ಅಧ್ಯಕ್ಷೆ ಕವಿತಾ ಮೇಟಿ ಅವರು 2015-16ನೇ ಸಾಲಿನ 14ನೇ ಹಣಕಾಸು ಕ್ರಿಯಾಯೋಜನೆಯಲ್ಲಿ ಅವ್ಯವಹಾರ ಮಾಡಿದ್ದಾರೆ.  ಹಲವು ಕಾಮಗಾರಿಗಳಡಿ ಭೋಗಸ್ ಬಿಲ್ ತೆಗೆದಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಅತಿ ಹೆಚ್ಚು ಕಾಮರ್ಿಕರ ಕೂಲಿ ಮೊತ್ತವನ್ನು ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಲಾಗಿನ್ ಮೂಲಕ ಒಪ್ಪಿಗೆ ನೀಡಿದ್ದರೂ ಸಂದಾಯ ಮಾಡಿಲ್ಲ. ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡದೆ ಸತಾಯಿಸುತ್ತಿದ್ದರು. ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರ ಮೇಲೆ ಸವರ್ಾಧಿಕಾರಿ ಧೋರಣೆ ಪ್ರದಶರ್ಿಸಿ ಏಕ ಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಸಕರ್ಾರಕ್ಕೆ ಮೋಸ ಮಾಡಬೇಕು ಎನ್ನುವ ಮನೋಭಾವ ಉಳ್ಳವರಾಗಿದ್ದರು. ಇವರ ವರ್ತನೆಯಿಂದ ಬೇಸತ್ತು ನಾವೆಲ್ಲರು ಅವಿಶ್ವಾಸ ಮಂಡಿಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕಾಯಿತು ಎಂದು ತಿಳಿಸಿದರು.