ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಮುನ್ನಡೆಸಲಿರುವ ಬೆನ್ ಸ್ಟೋಕ್ಸ್

ಲಂಡನ್, ಜೂನ್ 29: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಅನುಭವಿ ಆಟಗಾರ ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ನಾಯಕ ಜೋ ರೂಟ್ ಅವರು ತಂದೆಯಾಗಲಿದ್ದು, ಮೊದಲ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಎರಡು ತಂಡಗಳು ಟೆಸ್ಟ್ ಪಂದ್ಯಗಳನ್ನು ಆಡಲಿರುವ 'ಜೈವಿಕ ಸುರಕ್ಷತ ವಾತಾವರಣ'ವನ್ನು ತೊರೆದ ಕಾರಣ ರೂಟ್‌ ಒಂದು ವಾರ ಕಡ್ಡಾಯವಾಗಿ ಸ್ವಯಂ-ಕ್ವಾರಂಟೈನ್ ಆಗಬೇಕು.

ಇವರ ಅನುಪಸ್ಥಿತಿಯಲ್ಲಿ ತಂಡದ ಅನುಭವಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಂಡ ಮೊದಲ ಬಾರಿಗೆ ಮುನ್ನಡೆಸಲಿದ್ದಾರೆ. “ಸ್ಟೋಕ್ಸ್ ರಲ್ಲಿ ಕ್ಷಮತೆ ಇದೆ. ಆಲ್ ರೌಂಡರ್ ನಾಯಕತ್ವ ವಹಿಸಿಕೊಳ್ಳುತ್ತಿದ್ದಂತೆ ಹೆಚ್ಚುವರಿ ಕೆಲಸ ಅವರ ಬೆನ್ನು ಏರುತ್ತದೆ. ಅವರು ಉತ್ತಮ ಕ್ರಿಕೆಟಿಗ, ಅವರು ಕಳೆದ ಕೆಲವು ವರ್ಷಗಳಿಂದ ಆಟದಲ್ಲಿ ಸುಧಾರಣೆ ಕಂಡುಕೊಂಡಿದ್ದು, ಪ್ರಬುದ್ಧರಾಗಿದ್ದಾರೆ, ಆದ್ದರಿಂದ ಒಂದು ಪಂದ್ಯವನ್ನು ನಾಯಕತ್ವ ಮಾಡುವುದು ಸುಲಭವಾಗುತ್ತದೆ" ಎಂದು ಬ್ರಾಡ್ ತಿಳಿಸಿದ್ದಾರೆ.ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಜೋ ರೂಟ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಮೊದಲ ಟೆಸ್ಟ್ ಜುಲೈ 8 ರಿಂದ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯಲಿದೆ.