ಬಳ್ಳಾರಿ: ದೇವರಿಗೆ ನಾವೇನು ಮಾಡಿದ್ದೇವೆ ವಿದ್ಯಾಸಿಂಧು ಮಾಧವ ತೀರ್ಥ ಶ್ರೀ ಹೇಳಿಕೆ

ಲೋಕದರ್ಶನ ವರದಿ

ಬಳ್ಳಾರಿ 18: ದೇವರು ನಮಗೇನು ಮಾಡಿಲ್ಲ ಎನ್ನುವದಕ್ಕಿಂತ ದೇವರಿಗೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ತಂಬಿಹಳ್ಳಿ ಮಾಧವ ತೀರ್ಥ ಶ್ರೀಮಠದ ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಸುಶಮೀಂದ್ರ ತೀರ್ಥ ಮಂಗಲ ಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀಶಾರ್ವರಿ ನಾಮ ಸಂವತ್ಸರದ ಶ್ರೀಗೌತಮ ಸೂರ್ಯ ಸಿದ್ಧಾಂತ ಪಂಚಾಂಗ ಬಿಡುಗಡೆಗೊಳಿಸಿ ಮಾತನಾಡಿದರು. ನಿತ್ಯದ ಕೆಲಸದ ಜೊತೆಗೆ ದೇವರ ಧ್ಯಾನ, ಪೂಜೆ, ಪುನಸ್ಕಾರಗಳನ್ನು ಪ್ರತಿಯೋಬ್ಬರೂ ಮಾಡಲು ಮುಂದಾಗಬೇಕು. ಅಂದಾಗ ಮಾತ್ರ ದೇವರು ಒಳ್ಳೆಯದನ್ನೂ ಮಾಡಲಿದ್ದಾನೆ. ದೇವರು ನಮಗೇನು ಮಾಡಿಲ್ಲ ಎಂದು ದೂಷಿಸುವದಕ್ಕಿಂತ ದೇವರಿಗೆ ನಾವೇನು ಮಾಡಿದ್ದೇವೆ ಎಂಬುದು ಮುಖ್ಯ. ನಾವು ದೇವರಿಗೆ ನಮ್ಮ ಕೈಲಾದಷ್ಟು ಸೇವೆ ಮಾಡಲು ಮುಂದಾಗಬೇಕು, ವಿವಿಧ ಪೂಜೆಗಳನ್ನು ಮಾಡುವ ಮೂಲಕ ದೇವರಿಗೆ ಪ್ರತಿಯೋಬ್ಬರೂ ಭಕ್ತಿ ಸಮರ್ಕಿಸಬೇಕು. ದೇವರ ಪೂಜೆ, ಧ್ಯಾನ ಕಾಟಾಚಾರಕ್ಕಾಗಬಾದು, ಭಕ್ತಿಯಿಂದ ದೇವರನ್ನು ಪೂಜಿಸಿದರೇ ಮಾತ್ರ ಒಳ್ಳೆಯದನ್ನು ಮಾಡಲಿದ್ದಾನೆ ಎಂದರು.

ಇಲ್ಲಿನ ಹೆಸರಾಂತ ಜೊತಿಷಿ ಗುರುರಾಜ ಆಚಾರ್ಯ ಅವರು ಭಕ್ತರ ಅನುಕೂಲಕ್ಕಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಪ್ರತಿ ವರ್ಷ ನೂತನ ಪಂಚಾಂಗ ಬಿಡುಗಡೆಗೊಳಿಸುತ್ತಿದ್ದಾರೆ. ಇದರ ಜೊತೆಗೆ ಹೋಮ ಹವನ ಮಾಡುವ ಮೂಲಕ ಗಮನಸೆಳೆದಿದ್ದು, ಸಂತಸ ಮೂಡಿಸಿದೆ. ಪ್ರತಿಯೋಬ್ಬ ಭಕ್ತರು ಅವರ ಕಾರ್ಯಕ್ಕೆ ಕೈಜೋಡಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. 

ಜೋತಿಷಿ ಗುರುರಾಜ ಆಚಾರ್ಯ ಅವರು ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಪ್ರತಿ ವರ್ಷ ಭಕ್ತರ ಸಹಕಾರದಿಂದ ಪಂಚಾಂಗ ಬಿಡುಗಡೆ ಹಾಗೂ ಹೋಮ ಹವನಗಳನ್ನು ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆಯಿದೆ. ಭಕ್ತರ ಸಹಕಾರ ಅತ್ಯಗತ್ಯ ಎಂದರು. ಮಳಖೇಡ್ದ ಶ್ರೀವೆಂಕಣ್ಣಾಚಾರ್ ಅವರ ನೇತೃತ್ವದಲ್ಲಿ ಪವಮಾನ ಹೋಮ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಈ ಸಂದರ್ಭದಲ್ಲಿ ವಿವಿಧ ಗಣ್ಯರು ಮಾತನಾಡಿದರು. 

ಜೋತಿಷಿ ಗುರುರಾಜ ಆಚಾರ್ಯ ಅವರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಈ ಸಂದರ್ಭದಲ್ಲಿ ಅಶೋಕ್ ಕುಲಕರ್ಣಿ  ಸಂಜೀವ ಪ್ರಸಾದ್, ಡಿ.ಗಿರಿ, ವೈದ್ಯರಾದ ಡಾ.ಶ್ರೀನಾಥ್, ಶ್ರೀಧರ್, ಲೆಕ್ಕ ಪರಿಶೋಧಕ ಪಾರ್ಥ ಸಾರಥಿ, ಭರತ್ ಕುಮಾರ್, ಶ್ರೀಅಹಲ್ಯಾ ಸೆರಿದಂತೆ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ  ಸೃಷ್ಟಿ, ವರ್ಷಿಣಿ ಪ್ರಾರ್ಥಿಸಿದರು. ನಂತರ ಆಗಮಿಸಿದ ಎಲ್ಲ ಭಕ್ತರಿಗೆ ಉಚಿತ ಪಂಚಾಂಗ್ಗಳನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ಸೃಷ್ಟಿ ಹಾಗೂ ಸಂಗಡಿಗರಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ಗಮನಸೆಳೆಯಿತು. ಇದಕ್ಕೂ ಮುನ್ನ ಲೋಕಕಲ್ಯಾಣಾರ್ಥವಾಗಿ ನಡೆದ ಹೋಮದಲ್ಲಿ ನಗರ ಸೇರಿದಂತೆ ನಾನಾ ಕಡೆಯಿಂದ ಅಗಮಿಸಿದ ನೂರಾರು ಭಕ್ತರು ಭಾಗವಹಿಸಿ ಭಕ್ತಿ ಸಮಪರ್ಿಸಿದರು. ನಂತರ ಪೂರ್ಣರ್ಹತಿ ನಡೆಯಿತು. ನಂತರ ಎಲ್ಲ ಭಕ್ತರಿಗೂ ತೀರ್ತ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.