ಲೋಕದರ್ಶನ ವರದಿ
ಬಳ್ಳಾರಿ 15: ಪ್ರಸ್ತುತ ದಿನಮಾನದಲ್ಲಿ ಬಳಕೆಯಾಗುವ ಭಾಷೆಯಲ್ಲಿರುವ ಬೈಗುಳಗಳನ್ನು ನಾವು ಗಮನಿಸಿದರೆ ಅದರಲ್ಲಿ ಲೈಂಗಿಕತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳೆಯರ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಬೈಗುಳ ಭಾಷೆಯನ್ನು ಬಳಸುತ್ತಿದ್ದಾರೆ. ಜೊತೆಗೆ ಭಾಷೆ ಬಳಕೆಯಲ್ಲಿಯೂ ಮಹಿಳಾ ತಾರತಮ್ಯ ಕಾಣಸಿಗುತ್ತದೆ ಎಂದು ಸ್ತ್ರೀವಾದಿ ಚಿಂತಕಿ ಡಾ.ಹೆಚ್.ಎಸ್.ಅನುಪಮಾ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗೂ ಕರ್ನಾಟಕ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದಿ ಕನರ್ಾಟಕ ಹಿಸ್ಟರಿ ಕಾಂಗ್ರೆಸ್ನ 29ನೇ ಮಹಾಸಮ್ಮೇಳನದ 2ನೇ ದಿನದ ಗೋಷ್ಠಿಯ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ತ್ರೀವಾದಿ ಚರಿತ್ರೆ ಮತ್ತು ನಾನು ಕಸ್ತೂರಿಬಾ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅನುಪಮಾ ಅವರು ನಾವು ಗಾಂಧಿ-150 ಎನ್ನುವ ವಿಷಯವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಗಾಂಧೀಜಿಯವರ ಹೋರಾಟದ ಬದುಕಿನ ಉದ್ದಕ್ಕೂ ಕಸ್ತೂರಿಬಾ ಅವರ ಸದಾ ಬೆಂಬಲ ಅಮೂಲ್ಯವಾದದ್ದು. ಗಾಂಧೀಜಿಯವರಿಗಿಂತ ಕಸ್ತೂರಿಬಾ ಅವರು ಆರು ತಿಂಗಳು ದೊಡ್ಡವರು. ಅವರಿಗೂ ಕೂಡ 150 ವರ್ಷಗಳಾಗಿವೆ. ಇಂತಹ ಧೀಮಂತ ಮಹಿಳೆಯನ್ನು ನಾವು ಗಾಂಧೀಜಿ ಅವರ ಜೊತೆಯಲ್ಲಿ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ನಾಗರತ್ನಮ್ಮ, ನಿಕಟಪೂರ್ವ ಸರ್ವಾಧ್ಯಕ್ಷರಾದ ಪ್ರೊ. ಎಸ್. ಷಡಕ್ಷರಯ್ಯ, ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ. ಈರಣ್ಣ ಪತ್ತಾರ, ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ ನಾಯಕ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಶೋಧನಾರ್ಥಿಗಳು ಹಾಗೂ ಕನ್ನಡ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.