ಲೋಕದರ್ಶನ ವರದಿ
ಬಳ್ಳಾರಿ 06: ಬಾಲಕಾಮರ್ಿಕ ಮಕ್ಕಳಿಗೆ ವಿಶೇಷ ಆರೋಗ್ಯ ತಪಾಸಣೆ ಮಾಡಿಸುವುದು ಅತ್ಯ ಅವಶ್ಯಕ ಮತ್ತು ಪ್ರತಿಯೊಂದು ಮಗು ಕೂಡ ಆರೋಗ್ಯಕರವಾದ ಜೀವವನ್ನು ಹೊಂದಬೇಕು ಎಂದು ಹೊಸಪೇಟೆ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದಶರ್ಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಪೂಣರ್ಿಮಾ ಕೆ. ಯಾದವ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ, ತಾಲೂಕು ಕಾನೂನು ಸೇವಾ ಸಮಿತಿ, ಕಾಮರ್ಿಕ ಇಲಾಖೆ, ರಾಷ್ಟ್ರೀಯ ಬಾಲಕಾಮರ್ಿಕ ಯೋಜನೆ, ವಿಮ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಕೀಲರ ಸಂಘ ಮತ್ತು ಹೊಸಪೇಟೆಯ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹೊಸಪೇಟೆಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಸಂಡೂರು, ಕೂಡ್ಲಿಗಿ, ಹೊಸಪೇಟೆ ಮತ್ತು ಹಡಗಲಿ ತಾಲೂಕಿನ 05 ಬಾಲಕಾಮರ್ಿಕ ಕೇಂದ್ರಗಳ 127 ಮಕ್ಕಳಿಗೆ ವಿಶೇಷ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲಕಾಮರ್ಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವುದು ಅತಿ ಅವಶ್ಯವಾಗಿದ್ದು, ಬಾಲಕಾಮರ್ಿಕ ಮಕ್ಕಳು ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುವುದರಿಂದ ಅವರು ಆರೋಗ್ಯದ ಕಡೆಗೆ ಹೆಚ್ಚು ಗಮನವಿರುವುದಿಲ್ಲ; ಈ ನಿಟ್ಟಿನಲ್ಲಿ ಬಾಲ ಕಾಮರ್ಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ಅವಶ್ಯಕತೆ ಇದೆ ಎಂದರು.
ಸಹಾಯಕ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಆರೋಗ್ಯ ಇದ್ದರೆ ಜೀವನದಲ್ಲಿ ಮುಂದೆ ಏನಾದರು ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಎಲ್ಲಾ ಮಕ್ಕಳು ಕಲಿಕೆಯ ಜೊತೆ ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಮತ್ತು ಆರೋಗ್ಯವಂತ ಮಕ್ಕಳಿಂದ ಆರೋಗ್ಯವಂತ ಸಮಾಜ ನಿಮರ್ಾಣಕ್ಕೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಚೆನ್ನಪ್ಪ ಮಾತನಾಡಿದರು.
ಜಿಲ್ಲಾ ಬಾಲಕಾಮರ್ಿಕ ಯೋಜನೆಯ ಯೋಜನಾ ನಿದರ್ೇಶಕರಾದ ಎ.ಮೌನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಮರ್ಿಕ ಅಧಿಕಾರಿ ಚಂದ್ರಶೇಖರ್ ಎನ್.ಐಲಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದಶರ್ಿ ಷಕೀಬ್, ತಾಲೂಕು ಕಾರ್ಯದಶರ್ಿ ಅನ್ನಪೂರ್ಣ ಸದಾಶಿವ, ರೋಟರಿ ಕ್ಲಬ್ ಅಧ್ಯಕ್ಷ ಗೊಗ್ಗ ವಿಶ್ವನಾಥ್, ವಕೀಲರ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.
ರಾಷ್ಟ್ರೀಯ ಬಾಲಕಾಮರ್ಿಕ ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ ಈಶ್ವರಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.