ಬಳ್ಳಾರಿ: ಬಸವ ಜಯಂತಿ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಲೋಕದರ್ಶನ ವರದಿ

ಬಳ್ಳಾರಿ 27: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಕುಡುತಿನಿ, ಸ್ಪಂದನಾ ಚಾರಿಟೇಬಲ್ ಟ್ರಸ್ಟ್, ಬಳ್ಳಾರಿ ಮತ್ತು ವಿಮ್ಸ್, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಬಿ.ಟಿ.ಪಿ.ಎಸ್.(ಕೆ.ಪಿ.ಸಿ.ಎಲ್) ಪವರ್ ಪ್ಲಾಂಟ್ನಲ್ಲಿ "ಬಸವ ಜಯಂತಿ" ನಿಮಿತ್ತ ದಿ: 27 ರಂದು ಬೆಳಿಗ್ಗೆ 10.00 ಗಂಟೆಯಿಂದ "ಸ್ವಯಂ ಪ್ರೇರಿತ ರಕ್ತದಾನ" ಶಿಬಿರವನ್ನು ಆಯೋಜಿಸಲಾಗಿತ್ತು.

        ಈ ಕಾರ್ಯಕ್ರಮದಲ್ಲಿ ಮೂಖ್ಯ ಅತಿಥಿಗಳಾಗಿ ನರೇಂದ್ರ ಕುಮಾರ್, ಕಾರ್ಯನಿವರ್ಾಹಕ ಅಧಿಕಾರಿಗಳು ಕೆ.ಪಿ.ಸಿ.ಎಲ್ ಕುಡುತಿನಿ, ಇವರು ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ ಕೆ.ಪಿ.ಸಿ.ಎಲ್ ಪ್ಲಾಂಟ್ನ ಸಿಬ್ಬಂದಿಯವರು ತಮ್ಮ ಕೆಲಸದ ವತ್ತಡದಿಂದ ಸಮಯವನ್ನು ತೆಗೆದು ಇಂತ ವಳ್ಳೆಯ ರಕ್ತದಾನ ಶಿಬಿರ ನಡೆಸುವ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದ್ದು ಅತ್ಯಂತ ಪ್ರಶಂಸನಿಯ ಎಂದು ತಿಳಿಸಿದರು.

        ಈ ಸಂದರ್ಭದಲ್ಲಿ ಸುಮಾರು 50 ಕಿಂತ ಹೆಚ್ಚು ಬಿ.ಟಿ.ಪಿ.ಎಸ್.(ಕೆ.ಪಿ.ಸಿ.ಎಲ್) ಪವರ್ ಪ್ಲಾಂಟ್ನ ಸಿಬ್ಬಂದಿ ರಕ್ತದಾನವನ್ನು ಮಾಡಿದರು.

       ಇದೇ ಸಂದರ್ಭದಲ್ಲಿ ಭೀಮರಾಯ, ಡಿ.ಜಿ.ಎಂ. ಹೆಚ್.ಆರ್.ಡಿ, ಆಂಜಿನೇಯ ನಾಯ್ಕ್, ರಮೇಶ್, ಬಸವನ ಗೌಡ, ಅಶೋಕ್, ಮೆಡಿಕಲ್ ಆಫೀಸರ್, ಬಿ.ಹರಿಶಂಕರ್ ಅಗರ್ವಾಲ್, ಅಜೀವ ಸದಸ್ಯರು, ರೆಸ್ ಕ್ರಾಸ್ ಸಂಸ್ಥೆ, ಬಿ.ದೇವಣ್ಣ, ರಕ್ತದಾನ ಸಮಿತಿ ಸದಸ್ಯರು, ರೆಡ್ ಕ್ರಾಸ್ ಸಂಸ್ಥೆ, ಮತ್ತು ಅಧ್ಯಕ್ಷರು, ಸ್ಪಂದನಾ ಚಾರಿಟೇಬಲ್ ಟ್ರಸ್ಟ್, ಬಳ್ಳಾರಿ. ವಿಮ್ಸ್ನ ವೈದ್ಯರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಛೇರಿ ಸಿಬ್ಬಂದಿಗಳಾದ ಮಂಜುನಾಥ್ ಉಪಸ್ಥಿತರಿದ್ದರು.