ಲೋಕದರ್ಶನ ವರದಿ
ಬಳ್ಳಾರಿ 24: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀಶನೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಅಮಾವಾಸ್ಯೆ ದಿನದಂದು ಬೆಳಗ್ಗೆ 6 ಗಂಟೆಗೆ 108 ಲೀ.ತೈಲದಿಂದ ತೈಲಾಭಿಷೇಕವನ್ನು ಮೂಲ ದೇವರಿಗೆ ಅಪರ್ಿಸಿದರು. ನಂತರ 8:30ಕ್ಕೆ ಶಾಂತಿ ಹೋಮವನ್ನು ಹಮ್ಮಿಕೊಂಡಿದ್ದರು. ಈ ಕಾಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ತಮ್ಮ ತಮ್ಮ ರಾಶಿಗಳಿಗೆ ಶಾಂತಿ ನಮ್ಮದಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.
ನಂತರ ಸಂಜೆ 5ಗಂಟೆಗೆ ಉತ್ಸವ ಮೂರ್ತಿಗೆ ತಮ್ಮ ಸ್ವ-ಹಸ್ತದಿಂದ ಮಹಾತೈಲಾಭಿಷೇಕವನ್ನು ಸಾಲು ಸಾಲಾಗಿ ಬಂದು ಅರ್ಪಣೆ ಮಾಡಿದರು. ಮೂಲ ದೇವರಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ನಡೆಸಿದರು. ಈ ಎಲ್ಲಾ ಕಾರ್ಯಕ್ರಮಗಳನ್ನು ದೇವಸ್ಥಾನದ ಮುಖ್ಯ ಆರ್ಚಕರಾದ ವ್ಯಾಸರಾಜ್ ಆಚಾರ್ ಅವರು ಬಹಳ ಶಿಸ್ತಿನಿಂದ ಪೂಜಾಕಾರ್ಯಕ್ರಮವನ್ನು ನೆರವೇರಿಸಿದರು. ದೇವಸ್ಥಾವದ ವ್ಯವಸ್ಥಾಪಕ ರಾಘವೇಂದ್ರ ರಾವ್ ಕಾರ್ಯಕ್ರಮಕ್ಕೆ ಬೇಕಾದ ಪೂಜಾ ಸಾಮಾಗ್ರಿಗಳನ್ನು ವ್ಯವಸ್ಥಿತವಾಗಿ ರೂಪಿಸಿದ್ದರು. ಇದರ ಎಲ್ಲಾ ರೂವಾರಿಯನ್ನು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಧನ ಮಲ್ಲನ ಗೌಡ ಅವರು ಈ ಕಾರ್ಯಕ್ರಮವನ್ನು ನೆರವೇರಿಸುವಲ್ಲಿ ಸಾವಿರಾರು ಭಕ್ತರಿಂದ ಪ್ರಶಂಸೆಗೆ ಪಾತ್ರರಾದರು.