ಬಳ್ಳಾರಿ: ಜಿಲ್ಲಾ ಸಂಕೀರ್ಣ ಕಟ್ಟಡದ ವಿನ್ಯಾಸ ಮಾಹಿತಿ ಒದಗಿಸಿ: ಎಡಿಸಿ ಮಂಜುನಾಥ

ಲೋಕದರ್ಶನ ವರದಿ

ಬಳ್ಳಾರಿ 05: ನಗರದಲ್ಲಿ ನಿಮರ್ಿಸಲಾಗುತ್ತಿರುವ ಜಿಲ್ಲಾ ಸಂಕೀರ್ಣ ಕಟ್ಟಡದ ವಿನ್ಯಾಸ ಅಂತಿಮಗೊಳಿಸುವಿಕೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆಯಿತು.

ಜಿಲ್ಲಾ ಸಂಕೀರ್ಣ ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ. ಈ ಕಟ್ಟಡದ ವಿನ್ಯಾಸ ಅಂತಿಮಗೊಳಿಸಲಾಗುತ್ತಿದ್ದು, ಸರಕಾರಿ ಇಲಾಖೆಗಳು ತಮಗೆ ಅಗತ್ಯವಿರುವಷ್ಟು ವಿಸ್ತೀರ್ಣದ ಮಾಹಿತಿಯನ್ನು ಕೂಡಲೇ ಒಪ್ಪಿಸಬೇಕು ಎಂದರು.

ನಮ್ಮ ಇಲಾಖೆಯ ಸ್ವಂತ ಕಟ್ಟಡವಿದೆ;ಈ ಜಿಲ್ಲಾ ಸಂಕೀರ್ಣ ಕಟ್ಟಡದಲ್ಲಿ ನಮಗೆ ಅವಕಾಶ ಬೇಡ ಎಂದು ಹೇಳುವವರು ಲಿಖಿತವಾಗಿ ಸಲ್ಲಿಸಿದಲ್ಲಿ ಅದನ್ನು ಬೇರೆ ಅಗತ್ಯವಿರುವ ಇಲಾಖೆಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಗೆ ಅಗತ್ಯವಿರುವ ವಿಸ್ತೀರ್ಣದ ಮಾಹಿತಿಯನ್ನು ಈ ಸಂದರ್ಭದಲ್ಲಿ ಒದಗಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಗೃಹಮಂಡಳಿ ಅಧಿಕಾರಿಗಳಾದ ಶಿವಶಂಕರ, ದತ್ತಾತ್ರೇಯ ಶೆಟ್ಟಿ, ಡಿಯುಡಿಸಿ ಅಧಿಕಾರಿ ರಮೇಶ, ಸಹಕಾರ ಇಲಾಖೆಯ ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.