ಬಳ್ಳಾರಿ: ಬೋದಕೇತರ ನೇಮಕಾತಿ: 55 ಅಭ್ಯರ್ಥಿಗಳ ಆಯ್ಕೆ

ಬಳ್ಳಾರಿ 26: ಇತ್ತೀಚೆಗೆ ಮುಕ್ತಾಯಗೊಂಡ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪನ್ಯಾಸಕರ ಮತ್ತು ಬೋದಕೇತರ ನೇಮಕಾತಿ ಪ್ರಕ್ರೀಯೆಯಲ್ಲಿ ಹೈ.ಕ ದಿಂದ 55 ಅಭ್ಯರ್ಥಿಗಳು  ಆಯ್ಕೆಯಾಗಿರುವುದನ್ನು ಹೈದರಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಸ್ವಾಗತಿಸಿದ್ದಾರೆ. ಈ ನೇಮಕಾತಿಯಲ್ಲಿ ಎಲ್ಲಾ ಸ್ಥಾನಗಳನ್ನು 371ಜೆ ಅಡಿ ನೀಡಬೇಕಾಗಿದ್ದ ಉದ್ದೆಗಳಗಾಗಿದ್ದವು. 

ಈ ಹಿಂದೆ ಹೊರಗಡೆಯಿಂದ ಬಂದವರನ್ನು ನೇಮಕಾತಿ ಮಾಡಿಕೊಂಡಿದ್ದರಿಂದ ಹೈದರಬಾದ್ ಕರ್ನಾಟಕ  ಭಾಗದ 371ಜೆ ಅನ್ವಯ ಉದ್ದೆಗಳ ನೇಮಕಾತಿ ಬಾಕಿ ಉಳಿದಿದ್ದನ್ನು ಇಲ್ಲಿ ಸ್ಮರಿಸಬಹುದು. ಇಷ್ಟೊಂದು ಹುದ್ದೆಗಳು ವಿಶ್ವವಿದ್ಯಾಲಯದಲ್ಲಿ ಏಕಕಾಲಕ್ಕೆ 371ಜೆ ಅಡಿಯಲ್ಲಿ ನೇಮಕಾತಿ ಆಗುತ್ತಿರುವುದು ಇದೇ ಮೊದಲು ಮತ್ತು ಸ್ವಾಗತಾರ್ಹ. 

ನೇಮಕಾತಿ ಪ್ರಕ್ರೀಯೆಯನ್ನು  ಪೂರ್ಣಗೊಳಿಸಿ ವಿಶ್ವವಿದ್ಯಾಲಯವನ್ನು ಹಾಗೂ ಇದಕ್ಕೆ ಸಹಕರಿಸಿದವರಿಗೆ ಅಭಿನಂದಿಸುತ್ತಾ ಈ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವು ಹಿಮ್ಮೆಟ್ಟಿದ್ದಾರೆ. ಹೈದರಬಾದ್ ಕನರ್ಾಟಕ ಹೋರಾಟ ಸಮಿತಿಯ ನ್ಯಾಯಯುತ ಹೋರಾಟಕ್ಕೆ ನಾವು ಸದಾ ಸಿದ್ದ ಎಂದು ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ