ಬಳ್ಳಾರಿ: ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಆಗಮನ

Bellary: Arrival of the glorious Rath Yatra of Anubhav Mantapa-Basavadi Sharan

ಬಳ್ಳಾರಿ: ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಆಗಮನ 

ಬಳ್ಳಾರಿ 22: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆಯು ಮಂಗಳವಾರ ಬಳ್ಳಾರಿಗೆ ಆಗಮಿಸಿತು. 

ಸಮುದಾಯದ ಮುಖಂಡರು, ನಗರದ ಡಾ.ರಾಜ್ ಕುಮಾರ್ ರಸ್ತೆಯ ಸರ್ಕಾರಿ (ಮಾ.ಪು) ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ರಥಯಾತ್ರೆಯನ್ನು ಸ್ವಾಗತಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಸವಾದಿ ಶರಣರ ರಥಯಾತ್ರೆಗೆ ಪೂಜೆ ಸಲ್ಲಿಸಿ ಪುಷ್ಪನಮನಗೈದು, ಗೌರವ ಸಮರ​‍್ಿಸಲಾಯಿತು.ಇದೇ ಏ.29 ಮತ್ತು 30ರಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಎರಡು  ದಿನಗಳ ಕಾಲ ಆಯೋಜಿಸಿರುವ “ಅನುಭವ ಮಂಟಪ-ಬಸವಾದಿ ಶರಣ ವೈಭವ” ಕಾರ್ಯಕ್ರಮದ ಅಂಗವಾಗಿ ರಥಯಾತ್ರೆ ಆಯೋಜಿಸಲಾಗಿದ್ದು, ಮಂಗಳವಾರ ಬಳ್ಳಾರಿ ನಗರಕ್ಕೆ ಆಗಮಿಸಿದ ರಥಯಾತ್ರೆಯು ಸಿರುಗುಪ್ಪ ಮೂಲಕ ರಾಯಚೂರು ಜಿಲ್ಲೆಗೆ ರಥಯಾತ್ರೆಯು ತೆರಳಿತು. 

ಜಗತ್ತಿನ ​‍್ರ​‍್ರಥಮ ಸಂಸತ್ತು ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥದಲ್ಲಿ ಬಸವಣ್ಣ ಅವರೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್, ಭಗವಾನ್ ಗೌತಮ ಬುದ್ಧ, ಶಿವಶರಣೆ ಅಕ್ಕಮಹಾದೇವಿ, ಸಂತ ಶಿಶುನಾಳ ಶರೀಪ, ಗುರುನಾನಕ್, ಭಗವಾನ್ ಮಹಾವೀರ, ನಾರಾಯಣ ಗುರು, ಯೇಸು ಕ್ರಿಸ್ತರ ಪ್ರತಿಮೆಗಳನ್ನು ಅಳವಡಿಸಲಾಗಿದೆ. 

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ರಾಷ್ಟ್ರೀಯ ಬಸವ ದಳ ಕಾರ್ಯದರ್ಶಿ ರವಿಶಂಕರ್, ಮುಖಂಡರಾದ ಪನ್ನರಾಜ್ ಸಿರಿಗೇರಿ, ಟಿ.ಹೆಚ್‌.ಎಂ.ಬಸವರಾಜ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.