ಲೋಕದರ್ಶನ ವರದಿ
ಬಳ್ಳಾರಿ 15: ಖಾತೆ ಯಾವುದು ಕೊಟ್ಟರೂ ನನ್ನ ತಕರಾರು ಇಲ್ಲ. ಆದರೆ, ಬಳ್ಳಾರಿ ಉಸ್ತುವಾರಿ ಮಾತ್ರ ನನಗೆ ಕೊಡಿ ಎಂದು ಕೇಳಿದ್ದೇನೆ ಎಂದು ನೂತನ ಸಚಿವ ಅನಂದ್ ಸಿಂಗ್ ತಿಳಿಸಿದ್ದಾರೆ.
ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಆನಂದ್ ಸಿಂಗ್, ಖಾತೆ ಬದಲಾವಣೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.
ರೆಡ್ಡಿಗಳ ವಿರುದ್ಧ ಬಳ್ಳಾರಿ ಉಸ್ತುವಾರಿ ಗಿಟ್ಟಿಸಿಕೊಳ್ಳಲು ಆನಂದ್ ಸಿಂಗ್ ಮುಂದಾಗಿದ್ದಾರೆ. ಸದ್ಯ ಲಕ್ಷ್ಮಣ ಸವದಿ ಅವರು ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾರೆ.
ಎಲ್ಲವೂ ಹೈಕಮಾಂಡ್ ಜತೆ ಚಚರ್ೆ ಮಾಡಿ ಫೈನಲ್ ಆಗುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದು, ಕಾಯಲು ಹೇಳಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರ ನಿವಾಸ ಧವಳಗಿರಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಆನಂದ ಸಿಂಗ್. ಅರಣ್ಯ ಪರಿಸರ ಹಾಗೂ ಜೀವ ವಿಜ್ಞಾನ ಖಾತೆ ನೀಡದ್ದಕ್ಕೆ ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ಮತ್ತು ಅರಣ್ಯ ಒತ್ತುವರಿ ಆರೋಪಗಳನ್ನು ಎದುರಿಸುತ್ತಿರುವುದರಿಂದ ಆನಂದ್ ಸಿಂಗ್ ಗಣಿ ಮತ್ತು ಭೂ ವಿಜ್ಞಾನ ಬೇಡ ಎನ್ನುತ್ತಿದ್ದಾರೆ. ವಿಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ ಹೀಗಾಗಿ ಬೇಡ ಎಂದು ಮುಖ್ಯಮಂತ್ರಿ ಅವರಲ್ಲಿ ಅಲವತ್ತುಕೊಂಡಿರುವ ಆನಂದಸಿಂಗ್ ಅವರು, ಖಾತೆ ಬದಲಾಯಿಸಲು ಮನವಿ ಮಾಡಿಕೊಂಡಿದ್ದಾರೆ.