ಬಳ್ಳಾರಿ: ಪರವಾನಿಗೆ ಪಡೆಯದ 8 ಶಾಲಾ ವಾಹನಗಳು ಆರ್.ಟಿ.ಓ ವಶಕ್ಕೆ

ಬಳ್ಳಾರಿ 08: ನಗರದ ಪ್ಯೂಪಲ್ ಟ್ರೀ, ಬಾಲಬಾರತಿ ಕೇಂದ್ರಿಯ ವಿದ್ಯಾಲಯ ಶಾಲೆಗೆ ಮಕ್ಕಳನ್ನು ಸಾರಿಗೆ ಇಲಾಖೆ ಅನುಮತಿ ಪಡೆಯದ ವಾಹನಗಳಲ್ಲಿ (ವ್ಯಾನ್) ಕರೆದೊಯ್ಯುತ್ತಿದ್ದರು. ಅಂತಹ ವಾಹನಗಳನ್ನು ಪತ್ತೆ ಅಚ್ಚಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 8 ಮಾರುತಿ ಓಮ್ನಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಹಳದಿ ಬೊರ್ಡನ್ನು ಹೊಂದಿರಬೇಕು. ಆದರೆ ತೆರಿಗೆ ವಂಚನೆ ಮಾಡಿ ವೈಟ್ ಬೊರ್ಡನ ವಾಹನಗಳಲ್ಲೆ ಕರೆದುಕೊಂಡು ಹೋಗುತ್ತಿದ್ದ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಸಾಹಯಕ ಪ್ರಾದೇಶಿಕ ಅಧಿಕಾರಿ ಶ್ರೀನಿವಾಸಗಿರಿ ಮತ್ತು ಇನ್ಸ್ಪೆಕ್ಟರ್ ಹೆಮಂತಕುಮಾರ ಅವರು ನಗರದ ತಾಳೂರು ರಸ್ತೆ ಮತ್ತು ಪಾರ್ವತಿನಗರದ ಮುಖ್ಯ ರಸ್ತೆಯಲ್ಲಿ ಕಾಯರ್ಾಚರಣೆ ನಡೆಸಿದರು. ಇದರಿಂದಾಗಿ ಪರವಾನಗೆ ಪಡೆಯದೇ ವಾಹನದಲ್ಲಿ ತಾಳೂರು ರಸ್ತೆಯಲ್ಲಿರುವ ಪ್ಯೂಪಲ್ ಟ್ರೀ, ಬಾಲಬಾರತಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಮತ್ತು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಇದೇ ರೀತಿ ಬಳ್ಳಾರಿಯಲ್ಲಿ ಹಲವಾರು ಶಾಲೆಗಳಿಗೆ ಕರೆದೊಯ್ಯುವ ಪರವಾನಿಗೆ ಪಡೆಯದೇ ಇರುವ ವಾಹನಗಳನ್ನು ಚಲಾಯಿಸುತ್ತಿರುವವರ ಬಗ್ಗೆಯೂ ನಿಗವಹಿಸಿ ಅವುಗಳನ್ನು ಸಹ ಅತೀ ಶೀಗ್ರದಲ್ಲೆ ವಶಕ್ಕೆ ಪಡೆಯಲಿದ್ದಾರೆ.