ಲೋಕದರ್ಶನ ವರದಿ
ಬಳ್ಳಾರಿ 05: ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಕನ್ಯಕಪರಮೇಶ್ವರಿ ದೇವಸ್ಥಾನಕ್ಕೆ ನೂರು ವರ್ಷಗಳು ಪೂರೈಸಿದ್ದು ಇದರ ಪ್ರಯುಕ್ತ ನಾಲ್ಕು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಪ್ರಯುಕ್ತ ಬುಧವಾರ ಭಕ್ತಾಧಿಗಳು ಸಲ್ಲಿಸಿದ ದೇಣಿಗೆ ರೂಪದ ಬಂಗಾರದಿಂದ ಶ್ರೀ ಕನ್ಯಕಪರಮೇಶ್ವರಿ ದೇವಿಯ ವಿಗ್ರಹಕ್ಕೆ 5 ಕೆ.ಜಿ ಬಂಗಾರದಿಂದ ನಿರ್ಮಿಸಿರುವ ಬಂಗಾರದ ಸೀರೆ (ಕವಚ) ಕಳಸ ಸ್ಥಾಪನೆ ಮಾಡಲಾಯಿತು.
ಈ ವಿಶೇಷ ಕಾರ್ಯಕ್ರಮಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ನಡೆದ ಪಂಚಗವ್ಯಾ ಹೋಮ ಕಾರ್ಯಕ್ರಮವನ್ನು ವಿಕ್ಷಿಸಿ ಪೂರ್ಣಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದ್ಯಾಹ್ನ 2:30ಕ್ಕೆ ಐದು ಜನ ಬ್ರಹ್ಮಾಣ ಮುತ್ತೈದೆಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮವನ್ನು ರೂಪಿಸಿದ್ದರು. ನಂತರ ಪ್ರಸಾಧ ವಿನಿಯೋಗ ಕಾರ್ಯಕ್ರಮ ನಡೆಯಿತು. ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು, 7 ಗಂಟೆಗೆ ಮಾಜಿ ಧರ್ಮಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಅದೇರೀತಿ ಗುರುವಾರ ಕುಂಭಾಭಿಷೇಕಕ್ಕೆ ಪ್ರಧಾನ ಕಳಸಕ್ಕೆ ಬೆಳ್ಳಿ ಕಳಸ ಸ್ಥಾಪನೆ ಮತ್ತು 102ರಿಂದ 250 ಕಳಸ ಪ್ರತಿಷ್ಟಾಪನೆ, ಹೋಮ ಪೂಣರ್ಾಹುತಿ ಕಾರ್ಯಕ್ರಮ, ಕೈಗೊಳ್ಳಲಿದ್ದಾರೆ. ನಂತರ ಕೊನೆಯ ದಿನವಾದ ಪೆಬ್ರವರಿ 07 ಶುಕ್ರವಾರ ಬೆಳಗ್ಗೆ 6:30ಕ್ಕೆ ಸಾದ್ವಿ ಕಾಮಕ್ಷಮ್ಮ ಮಾತಾಜೀ ಅವರ ಸಮ್ಮೂಖದಲ್ಲಿ ಮಹಾ ಕುಂಭಾಭಿಷೇಕ, ಶಾಂತಿ ಹೋಮ, ಕನ್ಯಕೆಯರ ಪೂಜೆ, ತುಲಾಭಾರ ಸೇವೆ, ನಂತರ ಮಹಾಮಂಗಳಾರತಿ ಜೊತೆಗೆ ಬೋಜನ ವ್ಯವಸ್ಥೆ ಮಾಡಲಾಗಿದೆ. ನಂತರ ಸಾಯಂಕಾಲ 5 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀ ಕನ್ಯಕಪರಮೇಶ್ವರಿ ದೇವಿಯ ಭವ್ಯ ಮೆರವಣಿಗೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ, ಈ ಎಲ್ಲಾ ಕಾರ್ಯಕ್ರಮದ ಮಾಹಿತಿಯನ್ನು ದೇವಸ್ಥಾನದ ಧರ್ಮಕರ್ತರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಬೈರಾಪುರ ನಾರಾಯಣ ಶೆಟ್ಟಿ, ಗೋವಿಂದಯ್ಯ ಶೆಟ್ಟಿ, ಗಾಂದ್ಯಮ್ ಗೋಪಾಲಕೃಷ್ಣ, ಸೋಂತ ಗಿರಿಧರ ಸೇರಿದಂತೆ ಇನ್ನೂ ಹಲವಾರು ಸದಸ್ಯರು ಮಾಹಿತಿ ನೀಡಿದರು.