ಬೆಳಗಾವಿ2: ಉಡಾನ ಯೋಜನೆ ಅಡಿಯಲ್ಲಿ ಬೆಳಗಾವಿ ಹೈದ್ರಾಬಾದ ವಿಮಾನ ಹಾರಾಟದ ಉದ್ಘಾಟನಾ ಸಮಾರಂಭವು ಸೋಮವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯಿತು. ಸ್ಪೈಸ ಜೇಟ್ ನಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಬೆಳಗಾವಿ ವಿಮಾನ ನಿಲ್ದಾಣದ ನಿದರ್ೇಶಕರಾದ ಅಶೋಕ ಕುಮಾರ ಮೌರ್ಯರವರು ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡುತ್ತಾ ಉಡಾನ ಯೋಜನೆಯ ಅಡಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ ಎಂದರೆ ಅದಕ್ಕೆ ಸಕರ್ಾರದೊಂದಿಗೆ ಬೆಳಗಾವಿ ನಾಗರೀಕರ ಪಾತ್ರವು ಅಷ್ಟೇ ಪ್ರಮುಖವಾಗಿದೆ ಎಂದರು.
ಸ್ಪೈಸ ಜೇಟ್(ಎಸ್.ಜಿ3733/3734) ಪ್ರತಿದಿನ ಸಾಯಂಕಾಲ ಬೆಳಗಾವಿ ವಿಮಾನ ನಿಲ್ದಾಣಕ್ಕೆ 5. 35ಕ್ಕೆ ಆಗಮಿಸಲಿದ್ದು, ಪುನಃ 5.55ಕ್ಕೆ ಬೆಳಗಾವಿಯಿಂದ ಹೈದ್ರಾಬಾದಗೆ ಪ್ರಯಾಣ ಬೆಳಸಲಿದೆ.
ಸ್ಪೈಸ ಜೇಟ್ನ ವಿಭಾಗ ಕಾರ್ಯದಶರ್ಿಗಳಾದ ನಿಯಾಜ ಶಿರಹಟ್ಟಿ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ತಮ್ಮ ಅಭಿನಂದನೆಯನ್ನು ವ್ಯಕ್ತಪಡಿಸಿದರು.