ಬೆಳಗಾವಿ: ರಾಷ್ಟ್ರಮಟ್ಟದ ಉಗಮ-2ಕೆ19 ತಾಂತ್ರಿಕ ಉತ್ಸವ

ಲೋಕದರ್ಶನ ವರದಿ

ಬೆಳಗಾವಿ 13:  ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಗಣಕವಿಜ್ಞಾನ ವಿಭಾಗದ ವತಿಯಿಂದ ಒಂದು ದಿನದ "ರಾಷ್ಟ್ರಮಟ್ಟದ ಉಗಮ-2ಕೆ19 ತಾಂತ್ರಿಕ ಉತ್ಸವ"ದ ಉದ್ಘಾಟನಾ ಸಮಾರಂಭವು ದಿ.12ರಂದು ಸರ್. ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಜರುಗಿತು.

ಖ್ಯಾತ ಕನ್ನಡ ಚಲನಚಿತ್ರ ನಿಮರ್ಾಪಕ ಗಣೇಶ ಪಾಟೀಲ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಭಾರತವು ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಉಚ್ಚತಮ ಸ್ಥಾನದಲ್ಲಿದೆ.  ಯುವಕರು ತಮ್ಮಲ್ಲಿರುವ ತಾಂತ್ರಿಕ ಕೌಶಲ್ಯಗಳ ಛಾಯೆಯನ್ನು ತೋರಿಸುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು.  ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಸಂಪಾದಿಸುವದರೊಂದಿಗೆ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಮಾಹಿತಿ ತಂತ್ರಜ್ಞಾನದ ಕೌಶಲ್ಯಗಳನ್ನು ದೇಶ-ವಿದೇಶಗಳಲ್ಲಿ ಪ್ರಸಾರ ಮಾಡಬೇಕು.  ಭಾರತದ ಮಾಹಿತಿ ತಂತ್ರಜ್ಞಾನದ ಸಫಲತೆಯನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯಗೈಯಬೇಕು ಎಂದು ಕರೆನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಮಾತನಾಡುತ್ತಾ, ಕಳೆದ ಐದು ವರ್ಷಗಳಿಂದ ಗಣಕವಿಜ್ಞಾನ ವಿಭಾಗವು ತಾಂತ್ರಿಕ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾಥರ್ಿಗಳಲ್ಲಿ ಸುಪ್ತವಾಗಿ ಹುದುಗಿರುವ ತಾಂತ್ರಿಕ ಕೌಶಲ್ಯಗಳ ಅನಾವರಣಕ್ಕೆ ವೇದಿಕೆ ಒದಗಿಸಿದೆ.  ವಿದ್ಯಾಥರ್ಿಗಳು ಜ್ಞಾನಾಧಾರಿತ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸರ್ವರೀತಿಯ ಸಹಾಯ-ಸಹಕಾರವನ್ನು ಆಡಳಿತ ಮಂಡಳಿ ನೀಡುತ್ತದೆ ಎಂದು ನುಡಿದರು.  ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ ಎಲ್ಲಾ ಪ್ರಾಯೋಜಕರಿಗೆ ವಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ಕನರ್ಾಟಕ ರಾಜ್ಯದ 300 ವಿದ್ಯಾಥರ್ಿ ಪ್ರತಿನಿಧಿಗಳು ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಮಾರುಕಟ್ಟೆ, ದೃಶ್ಯವೀಕ್ಷಣೆ, ಖಜಾನೆ, ಮುಂತಾದ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು. 

ಕುಮಾರಿ. ಅಪೂವರ್ಾ ಹಾಗೂ ಸಂಗಡಿಗರು ಪ್ರಾಥರ್ಿಸಿದರು.  ಪ್ರೊ.ಏಕಾಂತಯ್ಯ ಸ್ವಾಮಿ ಸ್ವಾಗತಿಸಿದರು.  ಅಮೀರ ಅತಿಥಿಗಳನ್ನು ಪರಿಚಯಿಸಿದರು.  ಪ್ರಾಪ್ತಿ ವಂದಿಸಿದರು.  ರುಮಾನಾ ಹಾಗೂ ಮನೋಜ ಕಾರ್ಯಕ್ರಮ ನಿರೂಪಿಸಿದರು. 

ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತ ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.