ಇಂದು ಬೆಳಕಿಗೆ ಬರುತ್ತಿರುವ ಬೆಳವಡಿ ವಡ್ಡರ ಎಲ್ಲಣ್ಣನ ಕೃತಿ

Belavadi Vaddara Ellanna's work which is coming to light today

ಬೆಳವಡಿ ಶೂರ ರಾಣಿ ಮಲ್ಲಮ್ಮ, ಅಮಟೂರು ಬಾಳಪ್ಪ, ತ್ಯಾಗಶ್ರೀ ಸಿರಸಂಗಿ ಲಿಂಗರಾಜರು ಅರಟಾಳ ರುದ್ರಗೌಡರು, ಸಿದ್ದಪ್ಪ ಕಂಬಳಿ ಮುಂತಾದ ಮಹನೀಯರ ಕುರಿತು ​‍್ರ​‍್ರಥಮ ಕಾದಂಬರಿ ರಚಿಸಿದ ಚಾರಿತ್ರಿಕ ಕಾದಂಬರಿಕಾರರೆಂದೇ ಹೆಸರು ಮಾಡಿದ ಯ.ರು.ಪಾಟೀಲರವರಿಂದ ಈಗ ಮತ್ತೊಂದು ಹೊಸ ಕಾದಂಬರಿ ‘ಒಡಲಾಳದ ಧ್ವನಿ ಶೂರ’ ಬೆಳವಡಿ ವಡ್ಡರ ಯಲ್ಲಣ್ಣ.  

ಕಿತ್ತೂರು-ಆಂಗ್ಲೋ ಪ್ರಥಮ ಯುದ್ದದ ಜಯಕ್ಕೆ ಕಾರಣಕರ್ತನಾದ ಅಮಟೂರು ಬಾಳಪ್ಪ. ಚೆನ್ನಮ್ಮನ ವಿಶ್ವಾಸಿಕ ಸರದಾರರಾದ ಗುರುಸಿದ್ದಪ್ಪ, ಅವರಾದಿ ವೀರ​‍್ಪ, ಮಂತ್ರಿ ಮಲ್ಲಪ್ಪ, ಸಂಗೊಳ್ಳಿ ರಾಯಣ್ಣ,  ವಡ್ಡರ ಯಲ್ಲಣ್ಣ, ಗಜವೀರ, ಬಿಚ್ಚುಗತ್ತಿ  ಚೆನ್ನಬಸಪ್ಪ ಇಂತವರ  ಪಟ್ಟಿ ಬೆಳೆಯುತ್ತದೆ. 

ಇವರಲ್ಲಿ ಒಂದಿಬ್ಬರು ಮಾತ್ರ ಬೆಳಕಿಗೆ ಬಂದಿದ್ದು, ವಾಸ್ತವಿಕವಾಗಿ ಇನ್ನುಳಿದವರೂ ಬೆಳಕಿಗೆ ಬಂದು ಶೂರರ ಚರಿತ್ರೆಯನ್ನು ಬೆಳಗಬೇಕಾಗಿತ್ತು. ಆದರೆ ಆಧಾರಗಳು ಮತ್ತು ಬರೆಯುವವರ ಕೊರತೆ, ಮುಖ್ಯವಾಗಿ ಇವರೆಲ್ಲ ಬೆಳಕಿಗೆ ಬರಲೇಬಾರದೆಂಬ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಫಲದಿಂದಾಗಿ ಇವರೆಲ್ಲ ಕತ್ತಲೆಯಲ್ಲಿಯೇ ಉಳಿದು ಬಿಟ್ಟರು. ಇತಿಹಾಸದ ವಿವಿಧ ಆಕರಗಳಿಂದಲೇ ವಿವರಗಳು  ಸಿಗಬೇಕೆಂದರೆ ಹೇಗೆ ಸಾಧ್ಯ? ಇಷ್ಟೆಲ್ಲ ತೊಂದರೆಗಳ ನಡುವೆಯೂ ಒಂದಿಷ್ಟು ಇತಿಹಾಸವನ್ನು  ಮುಗ್ಧ ಜನಪದರು ಜಾನಪದದ ವಿವಿಧ ಪ್ರಕಾರಗಳ  ಮೂಲಕ ಬೆಳಕಿಗೆ ತಂದಿರುವರು.   

ಇಂತಹವರ ಪೈಕಿ ಕತ್ತಲೆಯಲ್ಲಿದ್ದ ಶೂರ ಮತ್ತು ಜಾಣ ವಡ್ಡರ ಎಲ್ಲಣ್ಣ. ಈತನನ್ನು ಶೂರ ಎಲ್ಲಣ್ಣ, ವಡ್ಡರ ಎಲ್ಲಣ್ಣ, ಬುದ್ದ್ಯುಳ್ಳ ಎಲ್ಲಣ್ಣ, ನಾಯಕ ಎಲ್ಲಣ್ಣ ಎಂದೆಲ್ಲ ಕರೆಯುತ್ತಿದ್ದರು. ಎಲ್ಲರಿಗೂ ಪಂಚೇಂದ್ರಿಯಗಳು ಇದ್ದರೆ ಈತನಿಗೆ ಆರನೇಯ ಇಂದ್ರಿಯ ಜಾಗೃತವಾಗಿರುತ್ತಿತ್ತು ಇದೇ ಈತನ  ವಿಶಿಷ್ಟತೆ.   

ಶೌರ್ಯದ ದೀಕ್ಷೆ ಪಡೆದ ನೆಲ ಬೆಳವಡಿ.   ರಾಣಿ ಮಲ್ಲಮ್ಮನವರ ಶೌರ್ಯದ ವಿಸ್ತರಣೆಯ ಕಾಲಘಟ್ಟದ ಭಾಗವೇ ಶೂರ ಎಲ್ಲಣ್ಣ.  

ಮಹಾಭಾರತದ ಕರ್ಣನಿಗೆ ದೈವದತ್ತವಾಗಿ ಬಂದ ಕುಂಡಲಗಳಂತೆ, ಎಲ್ಲಣ್ಣನಿಗೆ  ದೈವದತ್ತವಾಗಿ ಬಂದ ಶ್ರವಣ ಶಕ್ತಿ ಮತ್ತು ಅದರಿಂದಲೇ ಆತನ ವ್ಯಕ್ತಿತ್ವ ಕೂಡ ಬೆಳೆದಿತ್ತು. ತನ್ನ ಹೆಗಲಿನ ಮೇಲಿರುವ ವಲ್ಲೆ ಅಥವಾ ಕಂಬಳಿಯನ್ನು ನೆಲಕ್ಕೆ   ಹಾಸಿ,  ಅದರ ಮೇಲೆ ತನ್ನ ಬಲಗಿವಿಯನ್ನು ಇಟ್ಟು ಸವದತ್ತಿಯ ಎಲ್ಲಮ್ಮ ದೇವಿಯನ್ನು ಸ್ಮರಿಸಿದರೆ ಸಾಕು.  ಸುಮಾರು ಎರಡು-ಮೂರು   ಮೈಲು ದೂರದ ಅಂತರದಲ್ಲಿ ಬರುವ ವಾಹನಗಳ, ಪ್ರಾಣಿಗಳ ಹೆಜ್ಜೆ ಸದ್ದನ್ನು ಗುರುತು  ಹಿಡಿಯುತ್ತ,  ಇವು ಇಷ್ಟೇ ಸಂಖ್ಯೆಯಲ್ಲಿ ಬರುತ್ತವೆ ಎಂದು ನಿಖರವಾಗಿ ಹೇಳುತ್ತಿದ್ದ. ಇದರಿಂದ ಮುಂಚಿತವಾಗಿಯೇ ವೈರಿ ಪಡೆಯ ರಹಸ್ಯವನ್ನು ತಿಳಿದುಕೊಳ್ಳಲು ಎಲ್ಲಣ್ಣನ ತಂಡಕ್ಕೆ ಬಹಳ ಅನುಕೂಲವಾಗುತ್ತಿತ್ತು.  

ಈ ವಲ್ಲಿ ಆತನಿಗೆ ಒಂದು ಆಯುಧವೇ ಆಗಿದ್ದು, ವಲ್ಲಿಯನ್ನು ನೆಲದ ಮೇಲೆ ಹಾಸಿ, ಅದರ  ನಡುವೆ ಒಂದಿಷ್ಟು ಕಲ್ಲಿನ ಚೂರುಗಳನ್ನಿಟ್ಟು, ಜೋಳಿಗೆಯಂತೆ ಮಾಡಿ,  ನಾಲ್ಕೂ ತುದಿಗಳನ್ನು ಗಟ್ಟಿಯಾಗಿ ಹಿಡಿದು ಮೇಲೆ ಗಿರಗಿರನೇ ಸುತ್ತಿ, ಆ ಕಲ್ಲಿನ ಚೂರುಗಳನ್ನು  ವೈರಿಗಳ ಮೇಲೆ ಗುರಿ ಇಟ್ಟು, ಬಿಟ್ಟರೆ ಆಯಿತು.  ನೂರಾರು ಹೆಜ್ಜೆ ದೂರದಲ್ಲಿರುವ ವೈರಿಗಳಿಗೆ  ಅವು ತಾಗುತ್ತಿದ್ದವು. ವೈರಿಗಳ ಹಣೆಗೆ, ತಲೆಗೆ ತೂತು ಬೀಳಬೇಕು ಅಥವಾ ಕಣ್ಣು ಗುಡ್ಡೆಗಳು ಕಳಚಿ ನೆಲಕ್ಕೆ  ಬೀಳಬೇಕು. ಇದರಿಂದ ಶತ್ರು ಪಾಳೆಯದಲ್ಲಿ ಹಾಹಾಕಾರವೇ ಏಳುತ್ತಿತ್ತು. ಇಂತಹ ಭೀಕರತೆಯನ್ನು ಕಂಡಿಲ್ಲವೆನ್ನುವ ಭಯಮಿಶ್ರಿತ ಭ್ರಮೆ ಹುಟ್ಟಿಸಿ ಬಿಡುತ್ತಿತ್ತಲ್ಲದೆ, ವೈರಿ ಪಡೆ ಅಲ್ಲಿಂದ ಪಲಾಯನಗೈಯುತ್ತಿತ್ತು.  

ಯಲ್ಲಣ್ಣನ ಈ ದಿವ್ಯವಾದ ಶಬ್ದವೇಧಿ ಶಕ್ತಿಯಿಂದ ಕಿತ್ತೂರಿನ ವೀರಾಧಿವೀರರಿಗೆ ಗೆರಿಲ್ಲಾ ಯುದ್ಧ ತಂತ್ರಕ್ಕೆ ಸಹಾಯಕವಾಯಿತು. ಕೂಟ ಯುದ್ಧದಲ್ಲಿಯೂ  ಮಹಾನ್  ಪರಾಕ್ರಮಿಯಾಗಿದ್ದ ಯಲ್ಲಣ್ಣ ತನ್ನ ಗೆಳೆಯರೊಂದಿಗೆ ಒಮ್ಮಿಂದೊಮ್ಮೆಲೆ ಬ್ರಿಟೀಷರ ಮೇಲೆ ಆಕ್ರಮಣ ಮಾಡುತ್ತಿದ್ದನು. ಇದರಿಂದ ಬ್ರಿಟೀಷರು ಕಕ್ಕಾಬಿಕ್ಕಿಯಾಗುತ್ತಿದ್ದರು. ಈತ ಖಡ್ಗ ಬಳಸುವುದರಲ್ಲಿಯೂ ಪರಿಣಿತನಾಗಿದ್ದ.  

ಬ್ರಿಟೀಷರ  ಟಪಾಲುಗಳನ್ನು ಯಲ್ಲಣ್ಣ ಕದ್ದು ಅವು ಅವರ ಊರುಗಳಿಗೆ ತಲುಪದಂತೆ ನೋಡಿಕೊಂಡು ಅವರ ಆಡಳಿತಕ್ಕೆ ಕಂಟಕವಾಗಿದ್ದನು. ಹೇಗೋ ಬ್ರಿಟೀಷರು ಮೋಸದಿಂದ ಯಲ್ಲಣ್ಣನನ್ನು ಬಂಧಿಸಿ ದೊಡ್ಡವಾಡದ ಏಳು ಸುತ್ತಿನ ಕೋಟೆಯೊಳಗೆ ಬಂಧಿಸಿದ್ದರೂ ತಪ್ಪಿಸಿಕೊಂಡು ಬಂದಿದ್ದ.  

ಯಲ್ಲಪ್ಪನ ವಂಶಸ್ಥರು ಕೃಷಿ ವೃತ್ತಿ ಹೊಂದಿದ್ದು,  ಸುಮಾರು 43 ಕೂರಿಗೆ ಜಮೀನು, ದೊಡ್ಡ ಮನೆ ಮತ್ತು ದನಕರುಗಳನ್ನು ಹೊಂದಿದ ಇವರ ಮನೆತನವು ಶ್ರೀಮಂತ ಮನೆತನವಾಗಿತ್ತು.   

ಕೆಲ ಸಲ ಕಿತ್ತೂರಿಗೆ ಬಂದ ಹಲವಾರು ಸಂಕಟಗಳಲ್ಲಿ   ಸೈನಿಕರಿಗೆ ದಿಕ್ಕೆ ತೋಚದಂತಾಗುತ್ತಿತ್ತು. ಆವಾಗ ಕ್ರಾಂತೀವೀರ ಬೆಳವಡಿ ವಡ್ಡರ ಯಲ್ಲಣ್ಣ ಎಲ್ಲ ವೀರರಿಗೆ ಧೈರ್ಯ ತುಂಬಿ ಸಮಾಧಾನ  ಹೇಳುತ್ತಿದ್ದ. ‘ಬ್ರಿಟೀಷರಂತೆ ಇದ್ದು, ಅವರ ಬಿಡಾರ ಹೊಕ್ಕು,  ಅವರ ಒಳಮರ್ಮವನ್ನರಿತು  ಅವರನ್ನೆ ಸದೆ ಬಡಿಯಬೇಕು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬುದು’ ಈತನ ರಣ ನೀತಿಯಾಗಿತ್ತು.  ಎಂತಹ ಸಮಸ್ಯೆ ಬಂದರೂ ಅದಕ್ಕೆ ಕ್ಷಣ ಮಾತ್ರದಲ್ಲಿ ಪರಿಹಾರ ಹೇಳಿ,  ಎಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ಇದರಿಂದ ಬೆಳವಡಿ ಯಲ್ಲಣ್ಣನನ್ನು ಎಲ್ಲರೂ ಪ್ರೀತಿಯಿಂದ ಬುದ್ದ್ಯುಳ್ಳ ಯಲ್ಲಣ್ಣನೆಂದು ಕರೆಯುತ್ತಿದ್ದರು.  

ತನ್ನ ಊರಾದ ಬೆಳವಡಿಯಲ್ಲಿ ಬ್ರಿಟೀಷರ ವಿರುದ್ಧ 800 ಜನ ಸೈನಿಕರ ದಂಡನ್ನು ಕಟ್ಟಿದ್ದ, ಬ್ರಿಟೀಷರ ವಿರುದ್ಧ ನಿಂತ ಯಲ್ಲಣ್ಣ ಹಫ್ತೆ ಹಣವನ್ನು ತುಂಬುತ್ತಿರಲಿಲ್ಲ. ಈ  ಕಾರಣದಿಂದ ಬ್ರಿಟೀಷರು 3 ಸಾರಿ ಮನೆಯ ಮೇಲೆ ದಾಳಿ  ಮಾಡಿ 18 ಚಕ್ಕಡಿಗಳು, ಶಸ್ತ್ರಾಸ್ತ್ರ, ಕೃಷಿ ಸಾಮಾನುಗಳು, ಕಾಳುಕಡಿ ಎಲ್ಲವನ್ನು ಒಯ್ದರು. 

ಎಲ್ಲಣ್ಣನಲ್ಲಿರುವ ವಿಶೇಷ ದೈವೀ ಶಕ್ತಿಯನ್ನು ಪರೀಕ್ಷಿಸಿಯೇ ಮಲ್ಲಸರ್ಜ ದೊರೆಗಳು ಆತನನ್ನು ತಮ್ಮ ಸೈನ್ಯ ವಲಯಕ್ಕೆ ಸೇರಿಸಿಕೊಂಡಿದ್ದರು.  

ಸಂಗೊಳ್ಳಿ ರಾಯಣ್ಣ ತನ್ನ ಹೊಟ್ಟೆಯಲ್ಲಿಯ ಮಾತುಗಳನ್ನು ಬೆಳವಡಿಗೆ ಓಡೋಡಿ ಬಂದು ಆಪ್ತ ಎಲ್ಲಣ್ಣನಿಗೆ ಹೇಳಿದಾಗಲೇ ಸಮಾಧಾನ. ಸಂಗೊಳ್ಳಿಯ ದುಷ್ಟ ಕುಲಕರ್ಣಿಯೊಂದಿಗೆ ಬೆಳೆದ ಹ್ಯಾವದ ಕಥೆಯನ್ನು ಹೇಳುವ ಪರಿ ಹಿ 

ದೌಡಾಯಿಸಿ ಬಂದನು ಬಂಟ ಬೆಳವಡಿ ಊರೊಳಗ 

ಬೆಳವಡಿ ಒಡ್ಡರ ಯಲ್ಲ ಮುಜರಿ ಸಲಾಮಪ್ಪ ನಿನಗ 

ಬಾರೊ ಹೆಚ್ಚಿನ ಬಂಟ ಯಾಕ ಬಂದ್ಯೋ ಮಧ್ಯಾನ್ಹದಾಗ 

ಮೊದಲಾದ ಮಜಕೂರ ನೀನೆ ಹೇಳತೇನಲೆ ತಮ್ಮಾ ಈಗ 

ಕುಲಕಣಿ ಬಾಳ್ಯಾಗ ನನಗ ವರ್ಮ ಬೆಳದೈತಿ ಸಂಗೊಳ್ಳ್ಯಾಗ 

ನಾ ಹೋಗತೇನಿ ನಾಡಮ್ಯಾಗ ಮಂದಿ ಕಟ್ಟತೇನೀಗ 

ನೀ ಹೋದ ಬಳಿಕ ನಂದೇನೈತಪ್ಪ ಬೆಳವಡಿಯೊಳಗ 

ಡಗಲಿ ಚಣ್ಣ ತೊಟ್ಟು ಹೆಗಲಮ್ಯಾಗ ಸಲಕಿ ಹಾಕ್ಯಾನಾಗ 

ಮೆಣಸಿನ ಬಡಿಗೆ ಕೈಯಾಗ ಹಿಡದ ಬೆನ್ನ ಹತ್ತ್ಯಾನ ಯಲ್ಲಪ್ಪಾಗ 

ದೌಡಾಯಿಸಿ ಬಂದಾನು ಬಂಟ ಬೇವಿನಕೊಫ್ಪ ಸ್ಥಳದಾಗ 

ಮರೆಯಾದ ಗಜವೀರನನ್ನು ಹುಡುಕಲು ರಾಯಣ್ಣ ಎಲ್ಲಣ್ಣನ ಸಹಾಯ ಕೇಳಿದ ಪರಿ ಹೀಗಿದೆ -