ರೈತರಿಂದ ಆನ್‌ಲೈನ್‌ ಟ್ರೇಡಿಂಗ್ ಆರಂಭ- ಬಿ.ಸಿ.ಪಾಟೀಲ್

ಕೊಪ್ಪಳ, ಏ.18,ಕೃಷಿ  ಸಚಿವನಾಗಿ ತಾವು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದು, ರೈತರ ಕೆಲಸಗಳನ್ನು  ಮಾಡುತ್ತಿರುವ ಹೆಮ್ಮೆ ಹಾಗೂ ಆತ್ಮತೃಪ್ತಿ ಎರಡೂ ತಮಗಿದೆ ಎಂದು ಕೊಪ್ಪಳ ಜಿಲ್ಲಾ  ಉಸ್ತುವಾರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಕಳೆದ ಹದಿನೈದು ದಿನಗಳಿಂದಲೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ  ನೀಡಿ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು, ರೈತರ ಸಮಸ್ಯೆಗಳನ್ನು ಖುದ್ದು  ಆಲಿಸಿದ್ದೇನೆ. ತಾವು ಸರ್ಕಾರ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೇ ನಿರ್ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಲಾಕ್‌ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ರೈತರಿಗೆ  ಯಾವೆಲ್ಲ ಅನುಕೂಲ ಮಾಡಿಕೊಡಬೇಕೋ ಅವೆದೆಲ್ಲವನ್ನೂ ಮಾಡಿದೆ. ರೈತರ ಕೃಷಿ ಚಟುವಟಿಕೆಗಳಿಗೆ  ಯಾವುದೇ ನಿರ್ಬಂಧವಿಲ್ಲ. ಅಗ್ರಿ ಗ್ರೀನ್ ಪಾಸ್‌ಗಳನ್ನು ಸಹ ಮಾರಾಟಕ್ಕೆ  ವಿತರಿಸಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಸಲಾಗಿದೆ. ಕೃಷಿ ಉತ್ಪನ್ನಗಳ  ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವು ಕಡೆ ರೈತರು ಆನ್‌ಲೈನ್‌ ಟ್ರೇಡಿಂಗ್  ಆರಂಭಿಸಿದ್ದಾರೆ. ದಳ್ಳಾಳಿಗಳ ಮಧ್ಯವರ್ತಿಗಳ ಹಾವಳಿ ತಪ್ಪಲು ಕ್ರಮಕೈಗೊಳ್ಳಲಾಗಿದೆ. ರೈತ  ಮಧ್ಯವರ್ತಿಗಳ ಸಂಪರ್ಕಕ್ಕೆ ಹೋದರೆ ಬೆಳೆಗಳು ಕಡಿಮೆ ಬೆಲೆಗೆ ಕೇಳುವ  ಸಾಧ್ಯತೆಯಿದೆ. ಹೀಗಾಗಿ ಗ್ರಾಹಕರ ಬಳಿಯೇ‌ ರೈತರು ತಮ್ಮ ಫಸಲನ್ನು ಮಾರಾಟ ಮಾಡಬಹುದು ಎಂದು  ಸಲಹೆ ನೀಡಿದರು.ಶಾಸಕ ಹಾಲಪ್ಪ ಆಚಾರ್ ಜಿ.ಪಂ.ಅಧ್ಯಕ್ಷ ವಿಶ್ವನಾಥ್‌ರೆಡ್ಡಿ, ಅಂಬರೀಷ್ ಕುಳಗಿ, ಅಮರೇಷ್ ಕರಡಿ ಉಪಸ್ಥಿತರಿದ್ದರು.ಕೃಷಿ  ಸಚಿವ ಬಿ.ಸಿ.ಪಾಟೀಲ್ ಅವರು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಇಂದು ಮೊದಲ  ಬಾರಿಗೆ ಉಸ್ತುವಾರಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು, ಸಭೆಗೂ ಮುನ್ನ ಇಲ್ಲಿನ ಕೋಳೂರು  ಗ್ರಾಮದಲ್ಲಿ ರೈತರನ್ನು ಭೇಟಿಯಾದ ಸಚಿವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕರೆ  ನೀಡಿದರು.
ಬಳಿಕ ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.