ನವದೆಹಲಿ, ಮಾ 27,ಮಾಜಿ
ಸ್ಟಾರ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಮ್, ಕೋವಿಡ್ -19 ವೈರಸ್ ಸೋಂಕು
ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹಗಲು-ರಾತ್ರಿ ಅವಿರತ ಶ್ರಮಿಸುತ್ತಿರುವ ಹಾಗೂ
ಕೋವಿಡ್ -19 ತಗುಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕೆಚ್ಚೆದೆಯ ಆರೋಗ್ಯ
ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ
ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ ತಮ್ಮ ಮಕ್ಕಳದೊಂದಿಗೆ ಆರೋಗ್ಯ ಕಾರ್ಯಕರ್ತರಿಗೆ
ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದಾಗಿದೆ.ಕೊರೊನಾ ವೈರಸ್ ಸೋಂಕು ತಡೆಗಟ್ಟಲು
ದಣಿವರಿಯದೆ ಕಾರ್ಯನಿರ್ವಹಿಸುತ್ತಿರುವ ಧೈರ್ಯಶಾಲಿ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ
ತಿಳಿಸಲು ಇಡೀ ದೇಶವೇ ಒಂದಾಗಲು ಸಾಧ್ಯವಾಯಿತು ಎಂದು ವಿಡಿಯೊಗೆ ಬೆಕ್ಹ್ಯಾಮ್ ಶಿರ್ಷಿಕೆ ನೀಡಿದ್ದಾರೆ.ಏಕಾಏಕಿ ಉಲ್ಬಣಗೊಂಡಿರುವ ಕೊರೊನಾ ವೈರಸ್ ಸೋಂಕು ಇಡೀ ಜಗತ್ತನ್ನೇ
ಸ್ತಬ್ಧಗೊಳಿಸಿದೆ. ಕ್ರೀಡಾ ಚಟುವಟಿಕೆಗಳಿಗೂ ಸಹ ದೊಡ್ಡ ಹೊಡೆತ ಬಿದ್ದಿದೆ. ಕೊರೊನಾದಿಂದಾಗಿ ಒಲಿಂಪಿಕ್ಸ್ ಸೇರಿದಂತೆ ಬಹುತೇಕ ಎಲ್ಲ ಟೂರ್ನಿಗಳನ್ನು ಮುಂದೂಡಲಾಗಿದೆ
ಹಾಗೂ ರದ್ದುಪಡಿಸಲಾಗಿದೆ.