ರಾಮನಗರ, ಮೇ.27,ಚನ್ನಪಟ್ಟಣ ನಗರದ ಸುಣ್ಣದ ಕೇರಿಯಲ್ಲಿ ಬೆಳ್ಳಂಬೆಳಗ್ಗೆ ಕರಡಿಯೊಂದು ಪ್ರತ್ಯಕ್ಷಗೊಂಡು ವೃದ್ಧೆಯ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ನಗರಸಭೆಯ ಮಾಜಿ ಸದಸ್ಯೆ ಸಾಕಮ್ಮ (65) ಮೇಲೆ ಕರಡಿ ದಾಳಿ ನಡೆಸಿ ಅವರ ಮುಖಕ್ಕೆ ಪರಚಿದ್ದು,ಪರಿಣಾಮವಾಗಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.ಕೂಡಲೇ ಅವರ ರಕ್ಷಣೆಗೆ ದೌಡಾಯಿಸಿದ ಮಗ ಸುಧೀರ್ (40) ಅವರ ಮೇಲೂ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ.ಸಾಕಮ್ಮ ಅವರು ಬೆಳಗ್ಗೆ ಮನೆಯಿಂದ ಹೊರಗೆ ಬಂದ ಸಂದರ್ಭದಲ್ಲಿ ಕಾಂಪೌಂಡ್ನಲ್ಲಿ ಅಡಗಿ ಕುಳಿತಿದ್ದ ಕರಡಿ ಏಕಾಏಕಿ ದಾಳಿ ನಡೆಸಿದೆ.ಸದ್ಯ ಸಾಕಮ್ಮ ಅವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಹೇಳಿದ್ದಾರೆ.