ಲೋಕದರ್ಶನ ವರದಿ
ಬೆಳಗಾವಿ 06: ಕ್ಯಾನ್ಸರ್ ರೋಗವು ಜನರಿಗೆ ಅರವಿಲ್ಲದಂತೆ ಜೀವವನ್ನು ಬಲಿಪಡಿಸುತ್ತಿದ್ದು, ಭಾರತ ದೇಶದಲ್ಲಿ ತುಂಬಾ ವ್ಯಾಪಕವಾಗಿ ಹರಡುತ್ತಿದೆ. ಜೀವಬಲಿ ನೀಡುತ್ತಿರುವ ಜನರಿಗೆ ಇದರ ಸರಿಯಾದ ತಿಳುವಳಿಕೆ ಇಲ್ಲದಿರುವುದು ಮುಖ್ಯಕಾರಣವಾಗಿದೆ. ಬೃಹತ್ ಜನಸಂಖ್ಯೆ ಹೊಂದಿರುವ ಭಾರತದ ಗ್ರಾಮೀಣ ಪ್ರದೇಶದ ಜನರಲ್ಲಿ ಇದರ ಹಾವಳಿ ಹೆಚ್ಚಾಗುತ್ತಿದೆ, ಸೂಕ್ತ ಸಮಯದಲ್ಲಿ ಮತ್ತು ಆರಂಭಿಕ ಹಂತದಲ್ಲಿ ರೋಗದ ಪರೀಕ್ಷೆ ನಡೆದಲ್ಲಿ ಬದುಕುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಎಂ. ರಾಮಚಂದ್ರಗೌಡ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಮಹಿಳಾ ಸಬಲೀಕರಣ ಕೋಶ, ಕನರ್ಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೆನೆಪೊಯಾ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆದ ಒಂದು ರಾಜ್ಯ ಮಟ್ಟದ ಕ್ಯಾನ್ಸರ್ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕ್ಯಾನ್ಸರ್ಗೆ ತುತ್ತಾದ ರೋಗಿಗಳು ಬಹುಪಾಲು ಮೂರನೇ ಹಂತದಲ್ಲಿ ಆಸ್ಪತ್ರೆಗೆ ಬರುವುದರಿಂದ ಚಿಕಿತ್ಸೆ ಫಲಕಾರಿ ಆಗುತ್ತಿಲ್ಲ ಆದ್ದರಿಂದ ಕ್ಯಾನ್ಸರ್ ರೋಗದ ಅರಿವು ಸಾಮಾನ್ಯ ವರ್ಗದವರಿಗೂ ದೊರೆಯುವಂತಾಗಬೇಕು, ಇದಕ್ಕೆ ಎನ್.ಎಸ್.ಎಸ್ ಒಂದು ಸೂಕ್ತ ಮಾಧ್ಯಮವಾಗಿದ್ದು ಅಧಿಕಾರಿಗಳು ತಾವು ನಡೆಸುವ ತಾವು ನಡೆಸುವ ವಾಷರ್ಿಕ ಶಿಬಿರಗಳಲ್ಲಿ ಒಂದು ದಿನವನ್ನು ಮೀಸಲಾಗಿರಿಸಿ ತಲುಪಿಸುವ ಜವಾಬ್ದಾರಿ ನಿಭಾಯಿಸಬೇಕೆಂದು
ಯೆನೆಪೊಯಾ ವಿಶ್ವವಿದ್ಯಾಲಯದ ಆಶ್ವಿನಿ ಶೆಟ್ಟಿಯವರು ಕ್ಯಾನ್ಸರದ ವಿವಿಧ ಪ್ರಕಾರಗಳನ್ನು ದೃಷ್ಯಮಾಧ್ಯಮದ ಮೂಲಕ ಪ್ರದಶರ್ಿಸಿ ಎನ್.ಎಸ್.ಎಸ್. ಅಧಿಕಾರಿಗಳೊಂದಿಗೆ ಸಂವಾದ ಮೂಲಕ ಚಚರ್ಿಸಿದರು. ಡಾ. ರೋಹನ್ ಥಾಮಸ್ ಮಾಡುತ್ತಾ ಕ್ಯಾನ್ಸರದ ಮೂಲ ಕಾರಣಗಳನ್ನು ವಿವರಿಸಿದರು. ಕ್ಯಾನ್ಸರ್ ತಡೆಗಟ್ಟುವ ಸಾಧ್ಯತೆಗಳನ್ನು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಎಸ್. ಓ. ಹಲಸಗಿ ಅವರು ತರಬೇತಿಯ ಮುಖ್ಯ ಔಚಿತ್ಯವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿರಾದ ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವರಾದ ಅಶೋಕ ಡಿಸೋಜಾ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಳಾದ ನಂದಿನಿ ದೇವರಮನಿ ಪಿ. ನಾಗರಾಜ ಉಪಸ್ಥಿತರಿದ್ದರು. ಮಾಧುರಿ ಪ್ರಾಥರ್ಿಸಿದರು. ಸೈಲಿ ನಿರೂಪಿಸಿದರು. ಮನೀಷಾ ನೇಸರಕರ ವಂದಿಸಿದರು.