ಬೈಲಹೊಂಗಲ : 12 ನೇ ಶತಮಾನದಲ್ಲಿ ಬಸವಣ್ಣವರು, 16 ಶತಮಾನದಲ್ಲಿ ಭಕ್ತ ಕನಕದಾಸರು ಮನುಕುಲದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಶುಕ್ರವಾರ ತಾಲೂಕಾಡಳಿತದಿಂದ ನಡೆದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶದಲ್ಲಿ ಸಾಧು ಸಂತರು ಸಮಾಜ ಸುಧಾರಣೆ ಪ್ರಯತ್ನಿಸಿದ್ದಾರೆ. ಅದೇ ಮಾರ್ಗದಲ್ಲಿ ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜ ಅಂಕುಡೊಂಕುಗಳನ್ನು ತೋರಿಸಿ ಮಾರ್ಗದರ್ಶನ ಮಾಡಿದ್ದಾರೆ.
ಉಡಪಿಯಲ್ಲಿ ಶ್ರೀಕೃಷ್ಣನನ್ನು ನೋಡಲು ಕನಕದಾಸರನ್ನು ನೋಡಲು ಬಿಡದಿದ್ದಾಗ ಹಿಂಬಾಗಲಿನಿಂದ ಹೋಗಿ ಭಕ್ತಿಯಿಂದ ಕೃಷ್ಣನನ್ನು ನೆನೆದು ನಮಸ್ಕರಿಸಿದಾಗ ತಾನಾಗಿಯೆ ಕೃಷ್ಣ ಹಿಂಬಾಗಿಲಿನಿಂದ ಕನಕದಾಸರತ್ತ ತಿರುಗಿ ಆಶಿರ್ವದಿಸಿರುವ ನಿದರ್ಶನದಿಂದ ನಮಗೆ ಭಕ್ತಿಗೆ ದೇವರು ಒಲಿಯುತ್ತಾನೆಂದು ಎಂಬುದು ತಿಳಿಯುತ್ತದೆ ಎಂದರು.
ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಮಾತನಾಡಿ, ಕನಕದಾಸರು ಕೀರ್ತನಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದಾರೆ.
ಜ್ಯಾತ್ಯಾತೀಯವಾಗಿರಲು ಪ್ರಯತ್ನ ಮಾಡಬೇಕೆಂದು ತಿಳಿಸಲು ಕುಲಕುಲವೆಂದು ಬಡಿದಾಡಬೇಡಿರಿ ಎಂಬ ಗೀತೆಯಿಂದ ಜಾತಿ ನಿರ್ಮೊಲನೆ ಪ್ರಯತ್ನಿಸಿದ್ದಾರೆಂದರು. ಎಂ.ಆರ್.ಕುರಿ ಮಾತನಾಡಿ, ದಾಸ ಪರಂಪರೆಯಲ್ಲಿ ಕನಕದಾಸರು ಶ್ರೇಷ್ಠರಾಗಿದ್ದಾರೆ.
ಕನಕದಾಸರ ಸಿದ್ಧಾಂತವನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರಿ, ಬಿಇಓ ಪಾರ್ವತಿ ವಸ್ತ್ರದ, ತಾ.ಪಂ ಉಫಾಧ್ಯಕ್ಷ ಮಲ್ಲನಾಯ್ಕ ಬಾಂವಿ, ಹಿಂದುಳಿದ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಶಾಂತಾ ಮರಿಗೌಡರ, ಹಾಲುಮತ ಸಮಾಜ ಭಾಂಧವರು ಪಾಲ್ಗೊಂಡಿದ್ದರು.