ಲೋಕದರ್ಶನ ವರದಿ
ಬಸವನಬಾಗೇವಾಡಿ: ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳು ಕರೆ ನೀಡಿದ ಭಾರತ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಟಿಪ್ಪು ಕ್ರಾಂತಿ ಸೇನೆ ಸಂಘಟನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಹೊರತುಪಡಿಸಿದಂತೆ ಪಟ್ಟಣವು ಸೋಮವಾರ ಸಹಜ ಸ್ಥಿತಿಯಲ್ಲಿ ವಾರದ ಸಂತೆಯು ನಡೆಯಿತು.
ಸೋಮವಾರ ಎಂದಿನಂತೆ ವಾರದ ಸಂತೆಗೆ ಗ್ರಾಮೀಣ ಭಾಗದ ಜನತೆ ಪಟ್ಟಣಕ್ಕೆ ಖಾಸಗೀ ವಾಹನ-ಬೈಕ್ ಮುಖಾಂತರ ಸಂತೆಕಟ್ಟೆಗೆ ಆಗಮಿಸಿದರೇ ಅಂಗಡಿ-ಮುಗ್ಗಟ್ಟುಗಳು ಸಹಜಸ್ಥಿತಿಯಲ್ಲಿ ಎಂದಿನಂತೆ ವ್ಯಾಪಾರವಹಿವಾಟಿನಲ್ಲಿ ತಲ್ಲೀನವಾಗಿದ್ದು ಕಂಡು ಬಂತು, ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಗಿಳಿಯದೇ ದೂರುಳಿದು ಪ್ರಯಾಣಿಕರಿಗೆ ಹಾಗೂ ಜನತೆಗೆ ಓಡಾಟಕ್ಕೆ ಸ್ವಲ್ಪ ತೊಂದರೆ ಅನುಭವಿಸುವಂತಾಯಿತು.
ಬಸ್ ಸಂಚಾರ ಸ್ಥಗೀತವಾದ ಕಾರಣದಿಂದ ಪ್ರಯಾಣಿಕರು ಖಾಸಗೀ ವಾಹನಗಳ ಓಡಾಟ ಅನಿವಾರ್ಯವಾಗಿದ್ದರಿಂದ ಪ್ರಯಾಣಿಕರು ದುಬಾರಿ ಬೆಲೆ ತೆತ್ತು ಪ್ರಯಾಣಿಸಬೇಕಾಯಿತು, ಬಸ್ ಸಂಚಾರ ನಂಬಿ ಬಂದ ಕೇಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಧ್ವನಿವರ್ಧಕದಲ್ಲಿ ಜಾಹೀರಾತು ಹಾಗೂ ಎಫ್ಎಂ ರೇಡಿಯೋ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವದನ್ನು ನಂಬಿ ಬಸ್ಗಾಗಿ ಕಾಯ್ದು ಕುಳಿತು ನಂತರ ಸಿಬ್ಬಂದಿ ವಿಚಾರಿಸಿ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದ್ದು ಕಂಡು ಬಂತು.